ದಾವಣಗೆರೆ: ಮನೆಯ ಇಂಟರ್ ಲಾಕ್ ಮಾಡಿಕೊಂಡು ಸಂಬಂಧಿ ಮದುವೆಗೆ ಹೋಗಿದ್ದಾಗ ಮನೆಯ ಬೀಗ ಬೀಗ ಮುರಿದು ಒಳಗೆ ನುಗ್ಗಿ, ಮನೆಯಲ್ಲಿದ್ದ 1.02 ಲಕ್ಷ ಮೌಲ್ಯದ ಚಿನ್ನ- ಬೆಳ್ಳಿ ಆಭರಣಗಳನ್ನು ಇಬ್ಬರು ಆರೋಪಿಗಳು ಕಳ್ಳತನ ಮಾಡಿದ ಘಟನೆ ಗುರುವಾರ ನಡೆದಿದೆ.
ಇಲ್ಲಿನ ಕುವೆಂಪು ನಗರದ ಶ್ವೇತಾ ಗಣೇಶ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಶ್ವೇತಾ ತಮ್ಮ ಅಣ್ಣನ ಮಗನ ಮದುವೆಗೆ ಹೋಗಿದ್ದರು. ಮನೆಗೆ ಮರಳಿದ ಶ್ವೇತಾ ಗಣೇಶ ಇಂಟರ್ ಲಾಕ್ ತೆಗೆಯಲು ಮುಂದಾದಾಗ, ಅದಾಗಲೇ ಬೀಗ ತೆಗೆದಿದ್ದುದುದು ಕಂಡು ಬಂದಿತು. ಒಳಗೆ ಬರುತ್ತಿದ್ದಂತೆ ಶ್ವೇತಾರನ್ನು ಕಂಡ 2 ಕಳ್ಳರು ಓಡಿ ಹೋಗಿದ್ದಾರೆ. ತಕ್ಷಣ ಶ್ವೇತಾ ಕೂಗಿಕೊಂಡರಾದರೂ ಅಷ್ಟರಲ್ಲಿ ಕಳ್ಳರು ತಪ್ಪಿಸಿಕೊಂಡಿದ್ದರು. ಮನೆಯ ಬೀರುವಿನಲ್ಲಿಟ್ಟಿದ್ದ ಸುಮಾರು 1,02,500 ಮೌಲ್ಯದ ಚಿನ್ನ, ಬೆಳ್ಳಿ ಆಭರಣ ದೋಚಿದ್ದಾರೆ.
ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.