ಚನ್ನಗಿರಿ: ಜಿಲ್ಲೆಯ ಎಲ್ಲಾ ತಲೂಕು ಕೇಂದ್ರಗಳಲ್ಲಿ ಪಹಣಿ(ಆರ್ಟಿಸಿ)ಗಳನ್ನು ಪಡೆಯಲು ರೈತರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಕೌಂಟರ್ಗಳನ್ನು ತೆರೆಯಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸೇವಾ ಸಂಸ್ಥೆಯ ಅಧ್ಯಕ್ಷ ಸಿ.ಆರ್.ನಾಗೇಂದ್ರಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರೈತಾಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ಪಹಣಿ ಪತ್ರಿಕೆಗಳನ್ನು ಪಡೆಯಲು ಕೃಷಿ ಚಟುವಟಿಕೆಗಳನ್ನೆಲ್ಲ ಸ್ಥಗಿತಗೊಳಿಸಿ ದಿನವಿಡಿ ಕಾದು ನಿಂತು ಪಹಣಿ ಪಡೆಯುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಅಕ್ರಮ ಹೋಟೆಲ್ ತೆರವಿಗೆ ಆಗ್ರಹ
ಚನ್ನಗಿರಿ: ತಾಲೂಕಿನ ಸೂಳೆಕೆರೆ ದಡದಲ್ಲಿರುವ ತಾಲೂಕು ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ನಿಲಯದ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಂಭಾಗದಲ್ಲಿ ಅಕ್ರಮ ಮಾಂಸದ ಹೋಟೆಲ್ ಮತ್ತು ಅಂಗಡಿಯನ್ನು ತೆರವುಗೊಳಿಸಬೇಕೆಂದು ತಾಲೂಕು ಡಿಎಸ್ಎಸ್ ಸಂಚಾಲಕ ಎ.ಕೆ.ರುದ್ರಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ಕೆರೆಬಿಳಚಿ ಗ್ರಾ.ಪಂ.ಗೆ ಒಳ ಪಟ್ಟಿದ್ದು ಅಲ್ಪ ಸಂಖ್ಯಾತರ ಮುರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮದ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದಾ 10ನೇ ತರಗತಿಯಲ್ಲಿ ಓದುತ್ತಿರುವ 250 ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಇದ್ದಾರೆ.
ಈ ವಸತಿ ನಿಲಯದ ಮುಂಭಾಗದಲ್ಲಿಯೇ ಕೆರೆಬಿಳಚಿ ಗ್ರಾಮದವನೊಬ್ಬ ಮಾಂಸದ ಹೊಟೇಲಲ್ಮತ್ತು ಅಂಗಡಿಯನ್ನು ಇಟ್ಟುಕೊಂಡಿದ್ದು ಇದರಿಂದ ಬೈಕ್, ಕಾರು, ಲಾರಿಗಳನ್ನು ನಿಲ್ಲಿಸಿ ಊಟವನ್ನು ಮಾಡುವುದು, ಸಿಗರೇಟ್ ಸೇದುವುದು, ಗುಟ್ಕಾ ಹಾಜಿದು ಉಗುಳುವುದರಿಂದ ಈ ಪ್ರದೇಶ ಗಲೀಜಾಗಿ ವಿದ್ಯಾರ್ಥಿಗಳಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದರಿಂದ ಅಲ್ಲಿನ ಪರಿಸರ ಕೆಟ್ಟು ಹೋಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಅಕ್ರಮ ಮಾಂಸದ ಹೊಟೇಲ್ ಅನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.