ನಾಳೆ ಕಥಾ ಸಂಕಲನ ಲೋಕಾರ್ಪಣೆ

Updated on: 

ದಾವಣಗೆರೆ: ಮಾನವ ಹಕ್ಕುಗಳ ವೇದಿಕೆ ಮತ್ತು ಓದುಗ ಪ್ರಕಾಶ ಸಂಸ್ಥೆಯಿಂದ ಲೇಖಕ ಜಿ. ಮುದ್ದುವೀರಸ್ವಾಮಿ ಅವರ ಸಾವಿರದ ಕನಸುಗಳು ಕಥಾ ಸಂಕಲನ ಲೋಕಾರ್ಪಣೆ ಸಮಾರಂಭ ಫೆ.24ರಂದು ನಗರದ ರೋಟರಿ ಬಾಲಭವನದಲ್ಲಿ ನಡೆಯಲಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೇದಿಕೆ ಕಾರ್ಯದರ್ಶಿ ಎಲ್.ಎಚ್. ಅರುಣಕುಮಾರ, ಅಂದು ವೇದಿಕೆ ಅಧ್ಯಕ್ಷ ಪ್ರೊ. ಎಸ್.ಎಚ್. ಪಟೇಲ್ ಅಧ್ಯಕ್ಷತೆಯಲ್ಲಿ ಕವಿ, ಹಾವೇರಿಯ ಪ್ರಾಧ್ಯಾಪಕ ನಿಂಗಪ್ಪ ಮುದೇನೂರು ಕೃತಿ ಬಿಡುಗಡೆ ಮಾಡುವರು ಎಂದರು.
ಹೆಸರಾಂತ ಕವಿ ಚಂದ್ರಶೇಖರ ತಾಳ್ಯ ಕೃತಿ ಬಗ್ಗೆ ಮಾತನಾಡುವರು. ವೇದಿಕೆಯ ಉಪಾಧ್ಯಕ್ಷ ಬಿ.ಎಂ. ಹನುಮಂತಪ್ಪ, ಕಾರ್ಯದರ್ಶಿ ಎಲ್.ಎಚ್. ಅರುಣಕುಮಾರ, ಕೃತಿಯ ಕರ್ತೃ ಜಿ. ಮುದ್ದುವೀರಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ವೇದಿಕೆಯ ನಿರ್ದೇಶಕರು, ವಕೀಲರಾದ ಎನ್. ರಂಗಸ್ವಾಮಿ, ರಾಜಪ್ಪ ಇತರರು ಇದ್ದರು.
ಕೆಜೆಪಿಗೆ  ಸೇರ್ಪಡೆ
ಹರಪನಹಳ್ಳಿ: ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಇ. ಬೇವಿನಹಳ್ಳಿ ನಿಂಗಪ್ಪ ಅವರು ಬಿಜೆಪಿ ತೊರೆದು ಕರ್ನಾಟಕ  ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಇಲ್ಲಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಅಧಿಕೃತವಾಗಿ ಕೆಜೆಪಿಗೆ ಸೇರಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ನಿಂಗಪ್ಪ, ಉತ್ತಮ ಭವಿಷ್ಯವಿರುವ ಕೆಜೆಪಿಗೆ ಸೇರಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುವೆ ಎಂದು ಅವರು ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com