ಶ್ರೀರಾಂಪುರ: ಇಲ್ಲಿನ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ರಸ್ತೆ ಬದಿಯ ಸುಮಾರು 9 ಪೆಟ್ಟಿಗೆ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಈ ಪೆಟ್ಟಿಗೆ ಅಂಗಡಿಗಳಲ್ಲಿ ಕ್ಯಾಂಟೀನ್ಗಳನ್ನು ಹಾಗೂ ಕೋಳಿ ವ್ಯಾಪಾರ ನಡೆಸಲಾಗುತಿತ್ತು. ಕ್ಯಾಂಟೀನ್ಗಳಲ್ಲಿ ಇಡಲಾಗಿದ್ದ ಸಣ್ಣ ಪ್ರಮಾಣದ ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡು ಬೆಂಕಿ ಉಲ್ಬಣಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಲ್ಲಗೆ ಈ ಪೆಟ್ಟಿಗೆ ಅಂಗಡಿಗಳ ಮೇಲೆ ಹಾಕಲಾಗಿದ್ದ ತೆಂಗನ ಗರಿಗಳು ಬಿಸಿಲಿನಿಂದ ಒಣಗಿದ್ದುದು ಬೆಂಕಿ ತೀವ್ರಗೊಳ್ಳಲು ಕಾರಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.