ಬಿಜೆಪಿಗೆ ಬಸವರಾಜ್ ವಿದಾಯ

Updated on: 

ದಾವಣಗೆರೆ: ದಾವಣಗೆರೆ ನಗರಸಭೆಗೆ 1998ರಲ್ಲಿ ನಡೆದ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಅಪಹರಣಕ್ಕೆ ಒಳಗಾಗಿದ್ದ ವಕೀಲ, ಮುಖಂಡ ಎಲ್. ಬಸವರಾಜ ಕೊನೆಗೂ ಬಿಜೆಪಿ ನಾಯಕರ ವರ್ತನೆಗೆ ಬೇಸತ್ತು ಪಕ್ಷದೊಂದಿಗೆ ತಮ್ಮ ಸಂಪೂರ್ಣ ಸಂಬಂಧ ಕಳಚಿಕೊಂಡಿದ್ದಾರೆ.
ಪಕ್ಷದ ಮುಖಂಡರು ಹಂತ ಹಂತವಾಗಿ ಕಡೆಗಣಿಸುತ್ತಾ ಬಂದ ಹಿನ್ನೆಲೆಯಲ್ಲಿ, ಇಂತಹ ನಿರ್ಲಕ್ಷ್ಯ, ಕಡೆಗಣನೆ, ಶೋಷಣೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಪಕ್ಷ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಪ್ರಕಟಿಸಿದರು.
ಅಸಮಾಧಾನವಿದೆ: ಜನತಾ ಪರಿವಾರ ಮೂಲದಿಂದ ಬಂದವನಾದರೂ ಸಂಘ ಪರಿವಾರ, ಬಿಜೆಪಿಯಲ್ಲಿ ಸಕ್ರಿಯವಾಗಿ ನಾನು ತೊಡಗಿದ್ದಿದೆ. ಸಂಘದ ಪ್ರತಿ ಕಾರ್ಯಕ್ರಮ, ಚಟುವಟಿಕೆಯಲ್ಲಿ ನಾನು ಭಾಗಿಯಾಗುತ್ತಲೇ ಇದ್ದೇನೆ. ಬಿಜೆಪಿ ಬಗ್ಗೆ ನನ್ನ ಅಭಿಮಾನವಿದೆ. ಆದರೆ, ಪಕ್ಷದಲ್ಲಿ ನನ್ನನ್ನು ನಾಯಕರೆನಿಸಿಕೊಂಡವರು ನಡೆಸಿಕೊಂಡ ರೀತಿಗೆ ಅಸಮಾಧಾನವಿದೆ ಎಂದರು.
ರಾಜಕಾರಣ ನಿಂತ ನೀರಲ್ಲ. ಎಲ್ಲಾ ಪಕ್ಷದಲ್ಲೂ ನನ್ನ ಸ್ನೇಹಿತರಿದ್ದು, ಗಿಮಿಕ್ ರಾಜಕಾರಣಿ ನಾನಲ್ಲ. ಚುನಾವಣೆಯಲ್ಲಿ ಗೆಲ್ಲುತ್ತೇನೋ, ಸೋಲುತ್ತೇನೋ ಎಂಬುದಾಗಿ ಹೇಳುವುದು ಸಹ ಮತದಾರರಿಗೆ ಅವಮಾನ ಮಾಡಿದಂತೆ. ಮತದಾರನ ಆದೇಶ ಏನಿರುತ್ತದೋ ಅದನ್ನು ಪಾಲಿಸುತ್ತೇನೆ. ಆದರೆ, ಬಿಜೆಪಿಯ ರಾಜ್ಯ ಮತ್ತು ಜಿಲ್ಲಾ ನಾಯಕರು ಹಿರಿಯ ಮುಖಂಡರಲ್ಲಿ ಒಬ್ಬನಾಗಿದ್ದ ನನ್ನನ್ನು ಕಡೆಗಣಿಸಿದ ರೀತಿ, ನಿರ್ಲಕ್ಷಿಸಿದ್ದುದು ಮಾತ್ರ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಎಲ್. ಬಸವರಾಜ ಬೇಸರ ವ್ಯಕ್ತಪಡಿಸಿದರು.
ಮಖಂಡ ಸದಾನಂದ ಗುಜರಿ ತಾವೂ ಪಕ್ಷ ಬಿಡುತ್ತಿರುವುದಾಗಿ ಘೋಷಿಸಿದರು. ಜನಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಕೆ.ಎಚ್. ಬಸವರಾಜ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com