ಮತದಾರರ ಹೆಸರು ಮಾಯ: ಆರೋಪ

Updated on: 

ದಾವಣಗೆರೆ: ಪಾಲಿಕೆ ಚುನಾವಣೆಗೆ 30ನೇ ವಾರ್ಡ್‌ಗೆ ಜೆಡಿಎಸ್ ಪಕ್ಷದ ಆಕಾಂಕ್ಷಿಯಾಗಿ ಸ್ಪರ್ಧಿಸಲಿದ್ದ ತಾವು ಮತದಾರರ ಪಟ್ಟಿ ಪರಿಷ್ಕರಣೆಯಾಗದ ಹಿನ್ನೆಲೆಯಲ್ಲಿ ಅವಕಾಶ ವಂಚಿತವಾದ ಬಗ್ಗೆ ಪಕ್ಷದ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಬಾತಿ ಶಂಕರ್ ದೂರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸುವಂತೆ ಪಕ್ಷದ  ನಾಯಕರ ಸೂಚನೆ ಮೇರೆಗೆ 30ನೇ ವಾರ್ಡ್‌ನಲ್ಲಿ ತಯಾರಿ ನಡೆಸಿದ್ದೆ. ಕಳೆದ ಡಿಸೆಂಬರ್‌ನಲ್ಲೇ ಮತದಾರರ  ಪಟ್ಟಿ ಪರಿಷ್ಕರಣೆಗಾಗಿ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ನಿಮ್ಮ ಮತ್ತು ನಿಮ್ಮ ಪತ್ನಿ ಹೆಸರು ನೋಂದಣಿಯಾಗಿದ್ದಾಗಿ ಪ್ರತಿಕ್ರಯಿಸಿದ್ದರು ಎಂದರು.
ಆತುರದ ಚುನಾವಣೆ: ಆದರೆ, ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಸೇರ್ಪಡೆಯಾಗಿಲ್ಲ. ಇದಕ್ಕೆಲ್ಲಾ ಆತುರದ ಚುನಾವಣೆ  ಘೋಷಣೆಯೇ ಕಾರಣ. ನಾಮಪತ್ರ ಸಲ್ಲಿಸಲು ಹೋದಾಗ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದ ಕಾರಣ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನನಗೆ ತಪ್ಪಿತು. ಇದೀಗ ತಮ್ಮ ತಾಯಿಯನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾಗಿ ತಿಳಿಸಿದರು.
ಪೂರ್ವ ಸಿದ್ಧತೆ ಇಲ್ಲದೇ, ಆತುರದಲ್ಲಿ ಚುನಾವಣೆ ನಿಗದಿಗೊಂಡು ಸರಿಯಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸದೆ ಹಳೆಯ ಪಟ್ಟಿ ತೋರಿಸಲಾಗುತ್ತಿದೆ. ಇದರಿಂದ ಮತದಾರರಿಗೆ ಸಾಕಷ್ಟು ಗೊಂದಲದ ಜೊತೆಗೆ ಆಕಾಂಕ್ಷಿಗಳಿಗೆ ಅವಕಾಶ ವಂಚನೆ ಆಗುತ್ತಿದೆ ಎಂದು ದೂರಿದರು. ಪಕ್ಷದ ಮುಖಂಡರಾದ ಬಿ.ಎಂ. ಸತೀಶ, ಹನೀಫ್, ಚಂದ್ರಶೇಖರ, ಸಂಗನಗೌಡ್ರು ರಾಜಣ್ಣ, ನಾಗರತ್ನಮ್ಮ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com