ದಾವಣಗೆರೆ: ಎಪಿಎಂಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೂವಿನಮಡು ಎಚ್. ಹಾಲಪ್ಪನವರಿಗೆ ಎಪಿಎಂಸಿ ಹಮಾಲರ ಸಂಘದಿಂದ ಅಭಿನಂದಿಸಿ, ಸನ್ಮಾನಿಸಲಾಯಿತು.
ನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಹಮಾಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ದಾಸಕರಿಯಪ್ಪ, ಕಾರ್ಯದರ್ಶಿ ಬಾತಿ ನಾಗರಾಜ ಇತರರು ಅಭಿನಂದಿಸಿದರು.
ಇದೇ ವೇಳೆ ಸೂರು, ನೀರು, ಶಿಕ್ಷಣ ಸೇರಿದಂತೆ ಹಮಾಲರ ಬೇಡಿಕೆಗಳನ್ನು ಈಡೇರಿಸಲು ತಮ್ಮ ಅವದಿಯಲ್ಲಿ ಸ್ಪಂದಿಸಬೇಕು.
ಸಂಘದಿಂದ ಹಿಂದನಿಂದಲೂ ಹಲವಾರು ಹೋರಾಟ ನಡೆಸುತ್ತಾ ಬಂದಿದ್ದು, ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವಂತೆ ನೂತನ ಅಧ್ಯಕ್ಷರಿಗೆ ಮನವಿ ಮಾಡಲಾಯಿತು. ಸಂಘದ ಎಸ್. ಶಿವಕುಮಾರ, ಡಿ.ಆರ್. ವೀರಭದ್ರಪ್ಪ, ಸಮಿತಿ ಸಹಾಯಕ ಕಾರ್ಯದರ್ಶಿ ಎಸ್. ಶ್ಯಾಮ ಇತರರು ಇದ್ದರು ಎಂದು ಹಮಾಲರ ಸಂಘದ ಪ್ರಕಟಣೆ ಮಾಹಿತಿ ನೀಡಿದೆ.