ಹೊನ್ನಾಳಿ: ಪಟ್ಟಣ ಪಂಚಾಯಿತಿ 16 ವಾರ್ಡ್ಗಳ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ಕೊನೆ ದಿನವಾದ 23ರಂದು ಸಲ್ಲಿಕೆಯಾದ ವಾರ್ಡ್ವಾರು ನಾಮಪತ್ರಗಳ ಒಟ್ಟು ಸಂಖ್ಯೆ 113. ಈ ಪೈಕಿ ಬಿಜೆಪಿಯಿಂದ 18, ಕಾಂಗ್ರೆಸ್ನಿಂದ 18 , ಜೆಡಿಎಸ್ನಿಂದ 14, ಬಿಎಸ್ಆರ್ನಿಂದ 10, ಕೆಜೆಪಿಯಿಂದ 9 ಹಾಗೂ ಪಕ್ಷೇತರ ಅಭ್ಯರ್ಥಿಗಳು 44. ಒಟ್ಟು 113 ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆ ಫೆ.25ರಂದು ನಡೆಯಲಿದೆ. 28ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕವಾಗಿದ್ದು ಮಾ.7ರಂದು ಚನಾವಣೆ ನಡೆಯಲಿದೆ.
ನಾಮಪತ್ರಗಳ ವಾರ್ಡ್ವಾರು ವಿವರ: ವಾರ್ಡ್ 01- ಕಲ್ಕೇರಿ- (ಸಾಮಾನ್ಯ)- ಬಿಜೆಪಿ, ಕೆಜೆಪಿ ತಲಾ 2, ಕಾಂಗ್ರೆಸ್, ಜೆಡಿಎಸ್, ಬಿಎಸ್ಆರ್ ಪಕ್ಷಗಳು ತಲಾ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳು- 5.
ವಾರ್ಡ್ 02, ಆಗ್ರಹಾರ- (ಎಸ್.ಸಿ. ಮೀಸಲಾತಿ)- ಕಾಂಗ್ರೆಸ್ 2, ಜೆಡಿಎಸ್, ಬಿಜೆಪಿ, ಬಿಎಸ್ಆರ್ ತಲಾ 1 ಪಕ್ಷೇತರ 4.
ವಾರ್ಡ್ 03- ಮಂಡೆಕ್ಕೇರ ಕೇರಿ, (ಬಿಸಿಎಂ ಎ)- ಕಾಂಗ್ರೆಸ್ 2, ಜೆಡಿಎಸ್, ಬಿಜೆಪಿ, ಕೆಜೆಪಿ ತಲಾ 1, ಪಕ್ಷೇತರ 3.
ವಾರ್ಡ್ 04- ಕೋಟೆ (ಸಾಮಾನ್ಯ)- ಬಿಜೆಪಿ 02, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್ಆರ್ ತಲಾ 01, ಪಕ್ಷೇತರ 3.
ವಾರ್ಡ್ 05- ಪೇಟೆ (ಸಾಮಾನ್ಯ )- ಬಿಜೆಪಿ, ಕಾಂಗ್ರೆಸ್, ಜೆಡಿಎಸ್. ಬಿಎಸ್ಆರ್ ತಲಾ 01, ಪಕ್ಷೇತರ 4.
ವಾರ್ಡ್ 06- ದುರ್ಗಿಗುಡಿ ಉತ್ತರ (ಎಸ್.ಟಿ ಮಹಿಳೆ)- ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್ಆರ್, ತಲಾ 01
ವಾರ್ಡ್ 09- ದುರ್ಗಿಗುಡಿ ಮಧ್ಯಭಾಗ (ಸಾಮಾನ್ಯ)-ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್ಆರ್, ತಲಾ 01, ಪಕ್ಷೇತರ 4.
ವಾರ್ಡ್ 10- ದೊಡ್ಡಕೇರಿ (ಸಾಮಾನ್ಯ)- ಬಿಜೆಪಿ, ಕಾಂಗ್ರೆಸ್, ಕೆಜೆಪಿ, ತಲಾ 01, ಪಕ್ಷೇತರ 03.
ವಾರ್ಡ್ 11- ಖಾಜಿ ಮೊಹಲ್ಲಾ (ಬಿಸಿಎಂ ಎ ಮಹಿಳೆ)- (ಕಳ್ಳಿಕೊಪ್ಪಲು)- ಬಿಜೆಪಿ, ಕಾಂಗ್ರೇಸ್, ಜೆಡಿಎಸ್, ಬಿಎಸ್ಆರ್ ತಲಾ 1, ಪಕ್ಷೇತರ 2.
ವಾರ್ಡ್ 12- ಮಾರ್ಕೇಟ್ ಏರಿಯಾ (ಸಾಮಾನ್ಯ)- ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್ಆರ್ ತಲಾ 1 ಪಕ್ಷೇತರ 6.
ವಾರ್ಡ್ 13- ಪುಟ್ಟಕೆಂಚ್ಚಣ್ಣಾರ ಕೇರಿ (ಸಾಮಾನ್ಯ)- ಬಿಜೆಪಿ, ಕಾಂಗ್ರ್, ಪಕ್ಷೇತರ ತಲಾ 1.
ವಾರ್ಡ್ 14- ದುರ್ಗಿಗುಡಿ ದಕ್ಷಿಣ ಭಾಗ (ಬಿಸಿಎಂ ಎ ಮಹಿಳೆ) ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ ತಲಾ 01, ಪಕ್ಷೇತರ 2,
ವಾರ್ಡ್ 15- ಹೊಸಕೇರಿ (ಸಾಮಾನ್ಯ)- ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ ತಲಾ 01, ಪಕ್ಷೇತರ 3. ವಾರ್ಡ್ 16- ಸರ್ವಕರ್ ಕೇರಿ (ಸಾಮಾನ್ಯ ಮಹಿಳೆ)- ಬಿಜೆಪಿ. ಕಾಂಗ್ರೆಸ್, ಜೆಡಿಎಸ್. ಬಿಎಸ್ಆರ್ ತಲಾ 01, ಪಕ್ಷೇತರ 02.
ಅಭ್ಯರ್ಥಿಗಳ ವಿವರ
ಹರಪನಹಳ್ಳಿ: ಪುರಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್ಆರ್ ಪಕ್ಷಗಳು ಎಲ್ಲಾ 27 ವಾರ್ಡ್ಗಳಿಗೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜೆಡಿಎಸ್ 16, ಕೆಜೆಪಿ 23 ವಾರ್ಡ್ಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಸೂಕ್ಷ್ಮ, ಅತಿ ಸೂಕ್ಷ್ಮ ವಾರ್ಡ್ಗಳು
ಹರಪನಹಳ್ಳಿ: ಪುರಸಭಾ ಚುನಾವಣೆಯ 27 ವಾರ್ಡ್ಗಳಲ್ಲಿ 6 ಅತಿ ಸೂಕ್ಷ್ಮ ಹಾಗೂ 2 ಸೂಕ್ಷ್ಮ ಉಳಿದ 19 ವಾರ್ಡ್ಗಳು ಸಾಮಾನ್ಯ ಕ್ಷೇತ್ರಗಳಾಗಿವೆ.
ಅತಿ ಸೂಕ್ಷ್ಮ: ವಾರ್ಡ್ 1( ಗುಡೇಕಟ್ಟಿಕೇರಿ), 3 (ಅಗಸನಕಟ್ಟಿ), 5(ಬಾಪೂಜಿ ಬಡಾವಣೆ), 24 ( ಗುಂಡಿನಕೇರಿ), 25(ತೆಕ್ಕದಗರಡಿಕೇರಿ), 27(ಗಾಜಿಕೇರಿ), ಸೂಕ್ಷ್ಮ ಮತಗಟ್ಟೆಗಳು - ವಾರ್ಡ್ 26 -ವಾಲ್ಮೀಕಿ ನಗರ, 21(ಅಂಬೇಡ್ಕರ ನಗರ). 27 ವಾರ್ಡ್ಗಳಲ್ಲಿ 16368 ಪುರುಷರು, 15672 ಮಹಿಳೆಯರು ಸೇರಿ 38040 ಮತದಾರರಿದ್ದಾರೆ.