ಸೌಲಭ್ಯ ಪಡೆಯಲು ಸಂಘಟನೆ ಅಗತ್ಯ

Updated on: 

ದಾವಣಗೆರೆ: ಸರ್ಕಾರದ ಸೌಲಭ್ಯ ಎಲ್ಲಾ ಜಾತಿಗೂ ತಲುಪುವಂತೆ ಮಾಡುವ ನಿಟ್ಟಿನಲ್ಲಿ ವೀರಶೈವ ಸಮಾಜದ ಉಪಪಂಗಡ, ಒಳ ಜಾತಿಗಳನ್ನು ಮರೆತು, ವೀರಶೈವರು ಸಂಘಟಿತರಾಗಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಶ್ರೀ ಹೇಳಿದರು.
ನಗರದ ಅಭಿನವ ರೇಣುಕಾ ಮಂದಿರದಲ್ಲಿ ಶಿವಸಿಂಪಿ ಸಮಾವೇಶ, ಕುಲಗುರು ಶಿವದಾಸಿಮಯ್ಯ ಜಯಂತ್ಯುತ್ಸವ ಅಂಗವಾಗಿ ನಡೆದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ವೀರಶೈವ ಸಮಾಜ ಹಿಂದುಳಿಯಲು ಈ ಸಮಾಜದಲ್ಲಿರುವ ಒಳ ಪಂಗಡ, ಉಪ ಜಾತಿಗಳೆಂಬ ಕವಲುಗಳೇ ಕಾರಣ ಎಂದರು.
ಸಂಘಟಿತ ಹೋರಾಟ: ಸ್ವಾತಂತ್ರ್ಯ ಪೂರ್ವದಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನವಿತ್ತು. ನಂತರ ಸಮಾಜವನ್ನು ಹಿಂದು ಧರ್ಮವಾಗಿ ಮಾಡಲಾಯಿತು. ಇದರಿಂದ ಸಮಾಜಕ್ಕೆ ಸಿಗಬೇಕಾದ ಸೌಲಭ್ಯ, ಮೀಸಲಾತಿ, ಸ್ಥಾನಮಾನ ಸಿಗದಂತಾಯಿತು. ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತ ಧರ್ಮಗಳಿಗೆ ಸಿಗುವ ಸೌಲಭ್ಯವನ್ನು ವೀರಶೈವ ಧರ್ಮಕ್ಕೂ ಪಡೆಯಲು ಸಮಾಜ ಬಾಂಧವರು ಸಂಘಟಿತ ಹೋರಾಟ ನಡೆಸಬೇಕು ಎಂದು ಅವರು ತಿಳಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ವೀರಶೈವ ಧರ್ಮಕ್ಕೆ ಸ್ಥಾನಮಾನ ನೀಡಲು ಮುಂದಾಗಿದ್ದು, ರಾಜ್ಯ ಸರ್ಕಾರ ವಿರೋಧಿಸುತ್ತಿದೆ. ಮುಂಬರುವ ದಿನಗಳಲ್ಲಿ ವೀರಶೈವ ಸಮಾಜ ಬಾಂಧವರೆಲ್ಲಾ ಸಂಘಟಿತರಾಗಿ, ಪ್ರವರ್ಗ 2 ಎ ಸ್ಥಾನಮಾನಕ್ಕಾಗಿ ಹೋರಾಟ ನಡೆಸಬೇಕು.
ಈ ಹೋರಾಟಕ್ಕೆ ಸಮಾಜದ ಹಿರಿಯರು, ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ತಿಪ್ಪಣ್ಣನಂತಹ ಮುಖಂಡರ ನೇತೃತ್ವ ವಹಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.
ಇಚ್ಚಾಶಕ್ತಿ ಕೊರತೆ: ಸಮಾಜದ ಹಿರಿಯ ಮುಖಂಡ, ಉದ್ಯಮಿ ಅಥಣಿ ಎಸ್. ವೀರಣ್ಣ ಮಾತನಾಡಿ, ಸಮಾಜಕ್ಕೆ ರಾಜಕೀಯ ಇಚ್ಚಾಶಕ್ತಿ ಕೊರತೆ ಇದೆ. ಹಾಗಾಗಿಯೇ ವೀರಶೈವ ಧರ್ಮ ಸೌಲಭ್ಯ ವಂಚಿತವಾಗಿದೆ. ಇನ್ನು ಮುಂದೆ ಕಾಯಕ ಆಧಾರಿತ ಎಲ್ಲಾ ಒಳ ಪಂಗಡ ಮರೆತು, ಲಿಂಗಾಯತರೆಲ್ಲರೂ ಒಂದಾಗಿ, ಪ್ರವರ್ಗ 2 ಎ ಮೀಸಲಾತಿಗಾಗಿ ಹೋರಾಟ ನಡೆಸಬೇಕು. ಈ ನಿಟ್ಟಿನಲ್ಲಿ ಮಹಾಸಭಾ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪನವರಿಗೆ ಸಮಾಜದಿಂದ ದಾನ ಕೌಸ್ತುಭ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.
ನಂದಿಪುರದ ಮಹೇಶ್ವರ ಸ್ವಾಮೀಜಿ, ವಿರಕ್ತ ಮಠದ ಬಸವಪ್ರಭು ಶ್ರೀ ಸಾನ್ನಿಧ್ಯ ವಹಿಸಿದ್ದರು. ಬಾಪೂಜಿ ವಿದ್ಯಾಸಂಸ್ಥೆ ಖಜಾಂಚಿ ಎ.ಸಿ. ಜಯಣ್ಣ, ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ಸಮಾಜದ ಗೌರವಾಧ್ಯಕ್ಷ ಚಿಂದೋಡಿ ಚಂದ್ರಧರ,
ಜಿ.ಕೆ. ಕೊಟ್ರಪ್ಪ ಜವಳಿ, ಚಿಗಟೇರಿ ಜಯಪ್ರಕಾಶ, ಅಕ್ಕಮಹಾದೇವಿ, ರೇಖಾ ಎಂ.ಸಿ. ರಾಜು, ಎಂ.ಕೆ. ಬಕ್ಕಪ್ಪ, ಪ್ರೊರ, ಮಲ್ಲಿಕಾರ್ಜುನ ಜವಳಿ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com