ಹರಪನಹಳ್ಳಿ: ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಮಾಜಿ ಕಾರ್ಯದರ್ಶಿ ಡಾ. ರಮೇಶಕುಮಾರ ಅವರು ಬಿಜೆಪಿಗೆ ಸೋಮವಾರ ರಾಜಿನಾಮೆ ಸಲ್ಲಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನೀಡಿದ ರಾಜಿನಾಮೆ ಪತ್ರವನ್ನು ತಾಲೂಕು ಘಟಕದ ಅಧ್ಯಕ್ಷ ಆರುಂಡಿ ನಾಗರಾಜ ಅವರಿಗೆ ಸಲ್ಲಿಸಿದ್ದೇನೆ ಎಂದು ಹೇಳಿದರು. ಬಿಜೆಪಿಯಲ್ಲಿ ತಾಲೂಕು ಘಟಕದ ಉಪಾಧ್ಯಕ್ಷನಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. 15 ವರ್ಷ ಪಕ್ಷಕ್ಕೆ ದುಡಿದಿರುವುದು ಗಣನಿಗೆ ಬರಲಿಲ್ಲ ಎಂದರು. ಶಾಸಕ ಕರುಣಾಕರರೆಡ್ಡಿ ಬಗ್ಗೆ ಬೇಸರವಿಲ್ಲ. ಕೆಲವರು ಸತತವಾಗಿ ತುಳಿದರು ಎಂದರು.