ಕೇಂದ್ರ ಅರ್ಥ ಸಚಿವ ಪಿ. ಚಿದಂಬರಂ ಆಹಾರ, ಆರೋಗ್ಯ, ಶಿಕ್ಷಣ, ದೇಶ ರಕ್ಷಣೆಗೆ ಒತ್ತು ನೀಡುವ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವಂತಹ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಸ್ವಾಗತಿಸಿದೆ. 16,65,297 ಕೋಟಿ ಪ್ರಮಾಣದ ಬಜೆಟ್ ಮಂಡಿಸುವ ಮೂಲಕ ಕೇಂದ್ರ ಉತ್ತಮ ಕೆಲಸ ಮಾಡಿದೆ. ರೈತರ ಹಿತ ಕಾಯುವಂತಹ ಕೆಲಸಕ್ಕೆ ಮುಂದಾಗಿದ್ದು ಸ್ವಾಗತಾರ್ಹ ಕ್ರಮಗಳಾಗಿವೆ ಎಂದು ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ಹೇಳಿದ್ದಾರೆ.