ದಾವಣಗೆರೆ: ದಾವಣಗೆರೆ 11 ಕೆವಿ ಮೌನೇಶ್ವರ ವಿದ್ಯುತ್ ಮಾರ್ಗದ ಮೇಲೆ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಜ.22ರಂದು ಮಾರ್ಗದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ನಗರದ ಮೌನೇಶ್ವರ ಬಡಾವಣೆ, ಎಂಯುಎಸ್ಎಸ್ ಕಾಲನಿ, ನಿಟುವಳ್ಳಿ, ಲೆನಿನ್ ನಗರ, ನಿಟುವಳ್ಳಿ ಹೊಸ ಬಡಾವಣೆ, ಶಕ್ತಿ ನಗರ, ಜಯ ನಗರ, ದುರ್ಗಾಂಬಿಕಾ ಬಡಾವಣೆ, ಚಾಮುಂಡೇಶ್ವರಿ ಟಾಕೀಸ್, ಇಎಸ್ಐ ಆಸ್ಪತ್ರೆ, ಕೊರಚರಹಟ್ಟಿ, ಸರಸ್ವತಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಗರದ ಉಪ ವಿಭಾಗ- 1ರ ಎಇಇ ಕೆ.ಸಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಉಪನ್ಯಾಸ
ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಜ.22ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10.30ಕ್ಕೆ ಕಾಲೇಜು ಪ್ರಾಚಾರ್ಯ ಪ್ರೊ. ಡಿ. ಬಸವರಾಜ ಅಧ್ಯಕ್ಷತೆಯಲ್ಲಿ ತುಮೂಕುರಿನ ರಾಮಕೃಷ್ಣ- ವಿವೇಕಾನಂದರ ಆಶ್ರಮದ ಅಧ್ಯಕ್ಷ ಡಾ. ಸ್ವಾಮಿ ವಿರೇಶಾನಂದ ಸ್ವಾಮೀಜಿ ಯುವ ಶಕ್ತಿಗೆ ವಿವೇಕಾನಂದ ಉಕ್ತಿ ವಿಷಯವಾಗಿ ಉಪನ್ಯಾಸ ನೀಡುವರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವಿದೆ. ಪ್ರೊ. ಆರ್. ತಿಮ್ಮಾರೆಡ್ಡಿ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೀವನ ಕಲೆ ಶಿಬಿರ
ವ್ಯಕ್ತಿ ವಿಕಾಸ ಕೇಂದ್ರದಿಂದ ಜ.22ರಿಂದ 27ರ ವರೆಗೆ ದಾವಣಗೆರೆ ನಗರದ ನೂತನ ಕಾಲೇಜು ಸಮೀಪದ ತರಳಬಾಳು ಕೃಷಿ ಸಂಶೋಧನಾ ಕೇಂದ್ರದ ಎದುರಿನ ಸ್ಮಾರ್ಟ್ ಕಿಟ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಜೀವನ ಕಲೆ- ಸುದರ್ಶನ ಕ್ರಿಯೆ ಶಿಬಿರ ನಡೆಯಲಿದೆ. ಪ್ರತಿನದ ಬೆಳಿಗ್ಗೆ ಮತ್ತು ಸಂಜೆ 6ರಿಂದ 8.30ರವರೆಗೆ ರವಿಶಂಕರ ಗುರೂಜಿಯಿಂದ ರೂಪಿಸಲ್ಪಟ್ಟ ಜೀವನ ಕಲೆ- ಸುದರ್ಶನ ಕ್ರಿಯೆ ಶಿಬಿರದಲ್ಲಿ ಅಮೂಲ್ಯ ಜ್ಞಾನ, ಅಲೌಕಿಕ ಧ್ಯಾನ, ಪ್ರಾಣಯಾಮ, ಯೋಗಾಸನ ಹೇಳಿಕೊಡಲಾಗುವುದು. ಆಸಕ್ತರು ಹೆಸರು ನೋಂದಾಯಿಸಲು, ಹೆಚ್ಚಿನ ಮಾಹಿತಿಗೆ ಮೊ-98867- 36836, 96860- 66466ಗೆ ಸಂಪರ್ಕಿಸಲು ಶಿಕ್ಷಕ ಜಿ. ಶಿವಕುಮಾರ ಕೋರಿದ್ದಾರೆ.