ಹರಿಹರ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಮೂರೂವರೆ ವರ್ಷದಲ್ಲಿ ತಾಲೂಕಿಗೆ ಅಗತ್ಯವಿದ್ದ ಶೇ.60ರಷ್ಟು ಮೂಲಭೂತ ಸೌಕರ್ಯಗಳ ಕೊರತೆ ನೀಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಟಿಪ್ಪೂ ನಗರದಲ್ಲಿ ಭಾನುವಾರ ಸಂಜೆ ನಡೆದ ಕೆಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆ ಮತ್ತು ಶಾಸಕ ಬಿ.ಪಿ. ಹರೀಶ್ ಹಾಗೂ ಕೆಜೆಪಿ ರಾಜ್ಯ ಕಾರ್ಯದರ್ಶಿ ಬಿ.ಕೆ. ಸೈಯದ್ ರೆಹಮಾನ್ ಅವರ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಕೆಜೆಪಿ ರಾಜ್ಯ ಕಾರ್ಯದರ್ಶಿ ಬಿ.ಕೆ. ಸೈಯದ್ ರೆಹಮಾನ್ ಮಾತನಾಡಿ, ಈ ಹಿಂದೆ ಸುಮಾರು 10-15 ವರ್ಷಗಳಿಂದ ಜೆಡಿಎಸ್ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪಕ್ಷಕ್ಕಾಗಿ ದುಡಿದಿದ್ದೆ. ಆದರೆ ನನ್ನ ಜನಪ್ರಿಯತೆ ಸಹಿಸದ ಅವರು ನನಗೆ ನಗರಸಭಾ ಅಧ್ಯಕ್ಷ ಸ್ಥಾನ ಸಿಗದಂತೆ ಮಾಡಿದರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್ ಹೆಸರನ್ನು ಪ್ರಸ್ತಾಪಿಸದೆ ಸೂಚ್ಯವಾಗಿ ನುಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಕೆಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ನಗರಸಭಾ ಸದಸ್ಯ ರಮೇಶ ಮೆಹರ್ವಾಡೆ, ಅಜೀತ್ ಸಾವಂತ್, ಸೋಫಿಯಾ, ಸೈಯದ್ ರಿಜ್ವಾನ್, ರಹಮತ್ ಉಲ್ಲಾ, ಜಲೀಲ್ ಸಾಬ್, ಮೊಹಮದ್ ಸಾಬ್, ಅಖಿಲಾ ಬೇಗಂ ಇದ್ದರು.