ನಾಟಿ ಯಂತ್ರ ಕುರಿತು ಪ್ರಾತ್ಯಕ್ಷಿಕೆ

Updated on: 

ಹೊನ್ನಾಳಿ: ಪ್ರಸ್ತುತ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಕೂಲಿ ಕಾರ್ಮಿಕರ ಕೊರತೆ  ಸಮಯ, ಹಾಗೂ ಹಣದ ಕೊರತೆ ಎದುರಿಸುತ್ತಿದ್ದು, ಇದರ ಪರಿಹಾರಕ್ಕಾಗಿ ಕೃಷಿ ಇಲಾಖೆ ಬತ್ತದ ಬೆಳೆ ಬಗ್ಗೆ ಯಂತ್ರದ ಮೂಲಕ ಕಡಿಮೆ ಅವಧಿಯಲ್ಲಿ ಉತ್ತಮ ಗುಣಮಟ್ಟದಲ್ಲಿ ನಾಟಿ ಮಾಡುವ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತರಬೇತಿ ನೀಡುತ್ತಿದೆ ಎಂದು ಆತ್ಮ ಯೋಜನೆಯ ವಿಷಯ ತಜ್ಞ ಮಂಜುನಾಥ ಯರಿಮನಿ ಹೇಳಿದರು.
ತಾಲೂಕಿನ ಹರಳಹಳ್ಳಿ ಮತ್ತು ಬಿಜೋಗಟ್ಟೆಯ ಹೊಲದಲ್ಲಿ ಕೃಷಿ ಇಲಾಖೆಯಿಂದ ಅಧುನಿಕ ತಂತ್ರಜ್ಞಾನ ಒಳಗೊಂಡು ಯಂತ್ರದ ಮೂಲಕ ಬತ್ತ ನಾಟಿ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೋರಿಸಿಕೊಂಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೊನ್ನಾಳಿ ತಾಲೂಕು ಹರಳಹಳ್ಳಿಯ ಲೋಕಪ್ಪ ಹಾಗೂ ಬೀಜೋಗಟ್ಟೆಯ ಹುಚ್ಚಪ್ಪರೆಡ್ಡಿ ಎಂಬುವರ ಹೊಲದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಯಾಂತ್ರೀಕೃತ ಬತ್ತ ನಾಟಿ ಪದ್ಧತಿ ತೋರಿಸಿಕೊಟ್ಟರು.
ಬಿ.ಪಿ.ಟಿ. 5204 ಮತ್ತು ಜೆಜೆಎಲ್. 1798 ತಳಿಯ ಸಸಿಮಡಿಗಳನ್ನು ಯಂತ್ರದ ಮೂಲಕ ನಾಟಿ ಮಾಡುವ ವಿಧಾನವನ್ನು ತೋರಿಸಿಕೊಟ್ಟರು.
ಎಲ್ಲಾ ಬೆಳೆಗಳಂತೆ ಮೂಲ ಬೆಳೆಯಾಗಿ ಬೆಳೆಯುತ್ತಿರುವ ರೈತರು ನಾಟಿಯಿಂದ ಹಿಡಿದು ಕಟಾವಿನ ತನಕ ಅನುಭವಿಸುವ ತೊಂದರೆ ಮನಗಂಡು ಕೃಷಿ ಇಲಾಖೆ ಹಾಗೂ ಕುಬೇಟಾ ಕಂಪನಿಯವರು ಹೊಸ ತಂತ್ರದ ನಾಟಿ ಯಂತ್ರ ಬಳಸುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಅಂತರ ಕಾಪಾಡಿ: ಪ್ರತಿ ಎಕರೆಗೆ 8 ರಿಂದ 10 ಕೆ.ಜಿ. ಬೀಜ ಬಳಕೆ ಮಾಡುವುದೊರಂದಿಗೆ ಸಮರ್ಥ ನೀರಿನ ಬಳಕೆಯಾಗುತ್ತದೆ.
 ಸಸಿ ನಾಟಿ ಮಾಡುವಾಗ ಸಾಲಿನಿಂದ ಸಾಲಿಗೆ ಒಂದು ಅಡಿ ಅಂತರ ಸಸಿಯಿಂದ ಸಸಿಗೆ 20 ಸೆಂಟಿ ಮೀಟರ್‌ಅಂತರದಲ್ಲಿ ನಾಟಿ ಮಾಡುವುದರಿಂದ ಸಸಿಗಳು ಸದೃಢ, ಆರೋಗ್ಯವಾಗಿ ಬೆಳೆಯುತ್ತವೆ. ಇಳುವರಿ ಕೂಡ ಉತ್ತವಾಗಿರುತ್ತವೆ.  ಸಸಿಗಳಿಗೆ ಉತ್ತಮ ಬೆಳಕು ಗಾಳಿ ಸಿಗುವುದರಿಂದ ಗರಿ ಕೂಡ ಚೆನ್ನಾಗಿ ಒಡೆಯುತ್ತವೆ ಕೀಟ ಮತ್ತು ರೋಗಬಾಧೆ ಕೂಡಾ ಸಾಕಷ್ಟು ಕಡಿಮೆಯಾಗುತ್ತದೆ ಎಂದು ಕೃಷಿ ಆಧಿಕಾರಿಗಳು ತಿಳಿಸಿದರು.
ಪ್ರಾತ್ಯಕ್ಷಿಕೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಓಲೇಕಾರ್, ಮಂಜುನಾಥ್, ಆಂಜನೇಯ ಹಾಗೂ ಗ್ರಾಮದ ರೈತ ಸಮುದಾಯ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com