26ಕ್ಕೆ ನಿವೃತ್ತರಿಂದ ಗಣರಾಜ್ಯೋತ್ಸವ

Updated on: 

ದಾವಣಗೆರೆ: ಜಿಲ್ಲಾ ನಿವೃತ್ತ ನೌಕರರ ಸಂಘದಿಂದ ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಸಂಘದಲ್ಲಿ ಜ.26ರಂದು ಗಣರಾಜ್ಯೋತ್ಸವ ಸಮಾರಂಭ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 9ಕ್ಕೆ ಸಂಘದ ಅಧ್ಯಕ್ಷ ಜಿ.ಎನ್. ಷಣ್ಮುಖಪ್ಪ ಧ್ವಜಾರೋಹಣ ನೆರವೇರಿಸಲಿದ್ದು, ಎಆರ್‌ಜಿ ಕಾಲೇಜು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಜಯಣ್ಣ ಮಾತನಾಡುವರು. ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಇದೆ. ಸದಸ್ಯರು ಪಾಲ್ಗೊಳ್ಳುವಂತೆ ಕೆ.ಜಿ. ಶರಣಪ್ಪ, ಎನ್.ಎಂ. ಪಂಚಾಕ್ಷರಯ್ಯ, ಡಿ. ರುದ್ರಪ್ಪ, ಎನ್.ಜಿ. ದೇವೇಂದ್ರಪ್ಪ, ಎಸ್. ಗುರುಮೂರ್ತಿ, ಬಿ.ಆರ್. ಶಂಕರಪ್ಪ ಇತರರು ಕೋರಿದ್ದಾರೆ.
28ಕ್ಕೆ ಧ್ಯಾನ ಶಿಬಿರ
ಆಚಾರ್ಯ ಯೋಗ ವಿದ್ಯಾಶಾಲೆಯಿಂದ ಚಳಿಗಾಲದಲ್ಲಿ ದೇಹ- ಮಾನಸಿಕ ಆರೋಗ್ಯಕ್ಕಾಗಿ ಜ.28ರಿಂದ ಒಂದು ವಾರದ ಕಾಲ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರವವನ್ನು ದಾವಣಗೆರೆ ಎ.ವಿ.ಕೆ. ಕಾಲೇಜು ರಸ್ತೆ ಕೋಗುಂಡಿ ಕಟ್ಟಡದಲ್ಲಿ ಶಾಲಾ ಆವರಣದಲ್ಲಿ ಏರ್ಪಡಿಸಿದೆ. ಪ್ರತಿದಿನ ಬೆಳಿಗ್ಗೆ 6ರಿಂದ 7.30ರ ವರೆಗೆ ನಡೆಯುವ ಶಿಬಿರದಲ್ಲಿ ಸರ್ವಸಾರ ಪ್ರಾಣಾಯಾಮ, ಧ್ಯಾನ ತರಬೇತಿಯನ್ನು ನೀಡಲಾಗುವುದು. ಆಸಕ್ತರು ಹೆಸರು ನೋಂದಾಯಿಸಲು, ಹೆಚ್ಚಿನ ಮಾಹಿತಿಗೆ ಶಿವ (ಮೊ-98867- 63469, ದೂ-233831)ಗೆ ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಣಜಿ ನಾಗರಾಜಗೆ ಸಾಹಿತ್ಯ ಪ್ರಶಸ್ತಿ
ದಾವಣಗೆರೆ ತಾ. ಅಣಜಿ ಗ್ರಾಮದ ಸಾಹಿತಿ ಎಂ.ಟಿ. ನಾಗರಾಜಗೆ ಬೆಂಗಳೂರಿನ ಸಂಕ್ರಣ ಸಾಹಿತ್ಯ ಪತ್ರಿಕೆಯ ಸಂಕ್ರಮಣ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ನಾಗರಾಜರ  ದ್ವಿಪೂಜೆ  ಹನಿಗವನ ವಿಭಾಗದಲ್ಲಿ ಮೆಚ್ಚುಗೆ ಪಡೆದು, ಪ್ರಶಸ್ತಿಗೆ ಆಯ್ಕೆಯಾಗಿದೆ. 2011ನೇ ಸಾಲಿನಲ್ಲೂ ವಿಸ್ಮಯ ಹನಿಗವನಕ್ಕೆ ನಾಗರಾಜ ಪ್ರಶಸ್ತಿ ಪಡೆದಿದ್ದರು. ಸತತ 2 ಅವದಿಗೆ ಪ್ರಶಸ್ತಿಯನ್ನು ಪಡೆದ ನಾಗರಾಜ ಹನಿಗವನ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿದ್ದಾರೆ ಎಂದು ಪತ್ರಿಕೆ ಸಂಪಾದಕ ಚಂದ್ರಶೇಖರ ಪಾಟೀಲ್ ತಿಳಿಸಿದ್ದಾರೆ. ಅಣಜಿ ಗ್ರಾಮದ ಪ್ರತಿಭಾವಂತ ನಾಗರಾಜಗೆ ಸ್ನೇಹಿತರು, ಗ್ರಾಮಸ್ಥರು, ಹಿತೈಷಿಗಳು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com