ರಂಗಭೂಮಿಗೆ ಪ್ರೋತ್ಸಾಹ ಅಗತ್ಯ

Updated on: 

ಹೊನ್ನಾಳಿ: ರಂಗಭೂಮಿ ಒಂದು ಜೀವಂತ ಕಲೆಯಾಗಿದ್ದು ಅಧುನಿಕತೆಯ ಅವಿಸ್ಕಾರಗಳಾದ ಸಿನಿಮಾ, ಟಿ.ವಿ. ಮಾಧ್ಯಮಗಳ ಹಾವಳಿಯ ಮಧ್ಯೆಯು ಕೂಡ ಹಚ್ಚಹಸಿರಾಗಿ ಕಲಾವಂತಿಕೆ ನೈಜತೆಯನ್ನು ಉಳಿಸಿಕೊಂಡು ಬರುತ್ತಿರುವುದು ರಂಗಭೂಮಿಯ ಶ್ರೇಷ್ಠತೆಯನ್ನು ಸಾರುತ್ತದೆ ಎಂದು ರಂಗಕರ್ಮಿ ಪ್ರೇಂಕುಮಾರ್ ಭಂಡಿಗಡಿ ಹೇಳಿದರು.
ಸ್ಥಳೀಯ ಭಾರತೀಯ ವಿದ್ಯಾಸಂಸ್ಥೆಯ ಆವರಣದಲ್ಲಿ  ಶಿವಮೊಗ್ಗ ರಂಗಾಯಣ ಭಾರತೀಯ ರಂಗ ಭೂಮಿ ಸೇನೆ  ಹಾಗೂ ಭಾರತೀಯ ವಿದ್ಯಾಸಂಸ್ಥೆಯ ಸಂಯಕ್ತಾಶ್ರಯದಲ್ಲಿ ಮಕ್ಕಳಲ್ಲಿ ನಾಟಕ ಮತ್ತು ರಂಗಭೂಮಿ ಕಲೆಯ ಕುರಿತು ತರಬೇತಿ ಹಾಗೂ ಪ್ರದರ್ಶನ ಕಾರ್ಯಕ್ರಮದಡಿಯಲ್ಲಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರು.
ಸರ್ಕಾರದ ನೆರವು: ಸರ್ಕಾರ ಕೂಡ ರಂಗಾಯಣದಂತಹ ಸರ್ಕಾರಿ ಪ್ರಾಯೋಜಿತಸಂಸ್ಥೆಗಳ ಮೂಲಕ ರಂಗಭೂಮಿಯ ಜೀವನಂತಿಕೆಯನ್ನು ಕಾಪಾಡಿಕೊಂಡು ಯುವ ಜನತೆಯಲ್ಲಿ  ಜೀವಂತ ಕಲೆಯಾದ ರಂಗ ಚಟುವಟಿಕೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಕ್ಕೆ ಲಕ್ಷಾಂತರ ರು.ಗಳ ಅನುದಾನ ನೀಡುವ ಮೂಲಕ ನೆರವಾಗುತ್ತಿದ್ದು ಈ ಉದ್ದೇಶದ ಸಫಲತೆಗೆ ಸಮುದಾಯ ಸಹಕಾರ ಕೂಡ ಅತ್ಯಗತ್ಯವಾಗಿ ಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರಂಗಭೂಮಿ ಸೇನೆ ಹೊನ್ನಾಳಿಯ ನಿನಾಸಂ ನಲ್ಲಿ ತರಬೇತಿ ಪಡೆದ ರಂಗನಿರ್ದೇಶಕ ಎಚ್.ಸಿ. ಚಿದಾನಂದಮೂರ್ತಿ ಅವರು ಮಾತನಾಡಿ, ರಾಜ್ಯದಲ್ಲಿ ಸುಮಾರು 8 ಜಿಲ್ಲೆಗಳಲ್ಲಿ  ಈ ರೀತಿಯ ಮಕ್ಕಳಲ್ಲಿ ರಂಗಚಟುವಟಿಕೆಗಳ ತರಬೇತಿ ಮತ್ತು ಪ್ರರ್ದೇನ ಕಾರ್ಯಕ್ರಮ ನಡೆಸುವ ಮೂಲಕ ಸನಾತನ ಕಲೆಯಾದ ರಂಗಭೂಮಿ ಕಲೆಯನ್ನು ಉಳಿಸಿಕೊಂಡು ಬರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ರಂಗ ಅಭಿಯಾನ: ಅಲ್ಲದೆ ಯುವ ಸಮುದಾಯವನ್ನು ರಂಗಭೂಮಿ ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ  ಶಾಲಾ ವಿದ್ಯಾರ್ಥಿಗಳ ಹಂತದಲ್ಲಿ 100 ನಾಟಕಗಳು, 3 ಸಾವಿರ  ಮಕ್ಕಳು ಹಾಗೂ 1 ಲಕ್ಷ ಪ್ರೇಕ್ಷರರು ಎಂಬ ವಿನೂತನ ರಂಗ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಮಂಜಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ವೈಶ್ಯರ್, ಚುಟುಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಂ. ಸಿದ್ದಯ್ಯ, ರೂಪದರ್ಶಿ ಮಹಿಳಾ ಮಂಡಳಿ ಚ್.ಜಿ ಹೇಮಲತಾ, ಡಾ. ಕೊಟ್ರೇಶ್ ಉತ್ತಂಗಿ,  ಕಲಾವಿದ ಸತ್ಯನಾರಾಯಣ, ಪತ್ರಕರ್ತ ಆಂಜನೇಯ, ರಾಜು, ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ್ಕೆ.ಸಿ ಮಂಜಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com