ಹರಹರದಲ್ಲಿ ಶಾಂತಿಸಭೆ

Updated on: 

ಹರಿಹರ: ನಗರದ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಶಾಂತಿ ಸಭೆ ನಡೆಯಿತು.
ಸಿಪಿಐ ನಾಗೇಶ್ ಐತಾಳ ಮಾತನಾಡಿ, ಅಂಜುಮನ್ ಸಂಸ್ಥೆ ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ಉತ್ತಮವಾಗಿದೆ. ಡಕ್‌ಗಳ ಅಳವಡಿಕೆಯಿಂದಾಗಿ ಭಕ್ತಿಯ ಬದಲು ಮನೋರಂಜನೆಯಾಗುವ ಸಾಧ್ಯತೆ ಇದೆ. ಅಲ್ಲದೆ ಇತ್ತೀಚೆಗೆ ಕೆಲವೆಡೆ ಡಕ್ ಹಾಗೂ ಬ್ಯಾನರ್‌ಗಳ ಕಾರಣದಿಂದ ಗಲಭೆಗಳಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ ಎಂದು  ತಿಳಿಸಿದರು.
ಪಿಎಸ್‌ಐ ದೇವೇಂದ್ರಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲಾ ಹಬ್ಬ ಹರಿದಿನಗಳಲ್ಲಿಯೂ ಇಂತಹ  ವ್ಯವಸ್ಥೆ ನಿರಂತರವಾಗಿ ಇರುತ್ತದೆ ಎಂದು ವಿವರಿಸಿದರು. ಅಂಜುಮನ್ ಏ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಅಲ್ತಾಮಷ್, ಸನಾವುಲ್ಲಾ, ರಾಘವೇಂದ್ರ ಮಾರ್ಗದರ್ಶನ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com