ವಿಜ್ಞಾನ ಕೇಂದ್ರ ಕಟ್ಟಡ ಭೂಮಿಪೂಜೆ

Updated on: 

ದಾವಣಗೆರೆ:  ತಾ. ಆನಗೋಡು ಗ್ರಾಮಕ್ಕೆ ಸಮೀಪದ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದ ಎದುರಿನ ಉಳುಪಿನ ಕಟ್ಟೆ ಗ್ರಾಮದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಜ.28ರ ಬೆಳಿಗ್ಗೆ 11ಕ್ಕೆ ಭೂಮಿಪೂಜೆ ನಡೆಯಲಿದೆ. ಅಂದು ಬೆಳಿಗ್ಗೆ ಶಾಸಕ ಎಂ. ಬಸವರಾಜನಾಯ್ಕ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ ಭೂಮಿಪೂಜೆ ನೆರವೇರಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಜಿಲ್ಲಾ ಸಮಾಜ ಅಭಿವೃದ್ಧಿ ಸೇವಾ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದಿಂದ ಜ.28ರಂದು ದಾವಣಗೆರೆ ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಶಿಬಿರ ಉದ್ಘಾಟಿಸುವರು. ಡಾ. ಬಿ.ಆರ್. ಸುಮಿತ್ರಾದೇವಿ, ಡಾ. ಪರಶುರಾಮಪ್ಪ, ಕಾಸಲ್ ಎಸ್. ವಿಠ್‌ಠಲ್, ಎಂ. ಪೂಲ್‌ಚಂದ್ ಷಾ, ಡಾ. ಬಿ.ಕೆ. ಪ್ರಕಾಶ, ಎಂ.ವಿ. ಪರಮೇಶ್ವರಪ್ಪ, ಜಗದೀಶ ಹಿರೇಮಠ ಮತ್ತಿತರರು ಪಾಲ್ಗೊಳ್ಳುವರು.
ಇಂದು ಮುಖ್ಯಮಂತ್ರಿ ಚಂದ್ರು ಪ್ರವಾಸ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಜ.28ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳ ಲಿದ್ದಾರೆ. ಅಂದು 10.30ಕ್ಕೆ ಇಲ್ಲಿನ ವಿದ್ಯಾನಗರ ರಸ್ತೆಯ ಲಲತಕಲಾ ಮಹಾವಿದ್ಯಾಲಯ ಆವರಣದ ಕುವೆಂಬು ಭವನದಲ್ಲಿ ಪ್ರಾಚೀನ ಕನ್ನಡ ಕಾವ್ಯ, ಓದು- ವ್ಯಾಖ್ಯಾನ ರಸಗ್ರಹಣ ಶಿಬಿರದದಲ್ಲಿ ಮುಖ್ಯಮಂತ್ರಿ ಚಂದ್ರು ಪಾಲ್ಗೊಳ್ಳುವರು.
ಶಿವಾನುಭವ ಸಂಪದ ಕಾರ್ಯಕ್ರಮ
ದಾವಣಗೆರೆ ದೇವರಾಜ ಅರಸ್ ಬಡಾವಣೆಯ ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ ಜ.28ರಂದು 149ನೇ ಶಿವಾನುಭವ ಸಂಪದ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 7ಕ್ಕೆ ಹಾಲಕೆರೆ ಸಂಸ್ಥಾನ ಮಠದ ಅಭಿನವ ಅನ್ನದಾನ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಲಿಂಗರಂಗ ಪ್ರಶಸ್ತಿ ಪುರಸ್ಕೃತ ಡಾ. ಎಂ.ಜಿ. ಈಶ್ವರಪ್ಪ ಪಾಲ್ಗೊಳ್ಳುವರು. ಬಿ.ವಿ. ಶ್ರೀದೇವಿ, ಬಿ.ಪಿ. ವೀರಣ್ಣಗೆ ಸನ್ಮಾನಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com