ನಾಳೆ ಸಂದರ್ಶನ

Updated on: 

ನ್ಯಾಮತಿ: ಪಟ್ಟಣಕ್ಕೆ ಸಮೀಪವಿರುವ ಕತ್ತಿಗೆ ಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘ ಬೆಳೆದು ಬಂದ ದಾರಿ ಮತ್ತು ಸಂಘದ ಚಟುವಟಿಕೆಗಳ ಬಗ್ಗೆ ಕತ್ತಿಗೆ ಹಾಲು ಉತ್ಪಾದಕರ ಸಹಕಾರಸಂಘದ ಅಧ್ಯಕ್ಷ ಬಿ. ತಿಮ್ಮನಗೌಡ ಕತ್ತಿಗೆಯವರೊಡನೆ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗಲಿದೆ. ಫೆ.2.ರಂದು ಸಂಜೆ 6.50ಕ್ಕೆ ಪ್ರಸಾರವಾಗುವ ಕೃಷಿರಂಗ ಕಾರ್ಯಕ್ರಮದಲ್ಲಿ ಭದ್ರಾವತಿ ಆಕಾಶವಾಣಿಯು ಬಿತ್ತರಿಸುತ್ತದೆ.ಬಿ. ತಿಮ್ಮನಗೌಡಕತ್ತಿಗೆಯವರ ಸಂದರ್ಶನವನ್ನು ಡಾ.ವೇದಮೂರ್ತಿಯವರು ನಡೆಸಿಕೊಡಲಿದ್ದಾರೆ.
ಶಾಸಕ, ಸಚಿವರ ಹೆಸರಿಗೆ ವಿರೋಧ
ಚನ್ನಗಿರಿ: ಸರ್ಕಾರದ ಅನುದಾನಗಳಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಶಾಸಕರ ಮತ್ತು ಸಂಸದರ ಹೆಸರುಗಳನ್ನು ಇಡಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ ಕ್ಷೇತ್ರದಲ್ಲಿ ಹೆಸರುಗಳ ನಾಮಕರಣ ಪದ್ಧತಿ ಮುಂದುವರೆದಿದೆ ಎಂದು ತಾಪಂ ಸದಸ್ಯ ಉಸ್ಮಾನ್ ಷರೀಪ್ ಹೇಳಿದರು. ಗುರುವಾರ ಪಟ್ಟಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಲ್ಲೂರು ಗ್ರಾಮದ ಕಸ್ತೂರಬಾ ಗಾಂಧಿ ವಸತಿ ನಿಲಯಕ್ಕೆ ಜನಪ್ರತಿನಿಧಿಗಳ ಹೆಸರನ್ನು ಸಿಮೆಂಟ್‌ನಲ್ಲಿ ಅಕ್ಷರಗಳನ್ನು ನಿರ್ಮಿಸಿ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಲಾಗಿದೆ ಎಂದು ಆರೋಪಿಸಿದರು. ಸರ್ಕಾರದ ಅನುದಾನ ಬಳಸಿ ನಿರ್ಮಿಸಿರುವ ಕಟ್ಟಡಗಳಿಗೆ ಹೆಸರನ್ನು ತೆಗೆಸುವ ಕೆಲಸ ಆಗಬೇಕು ಮತ್ತು ಹೆಸರನ್ನು ಹಾಕಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ರಜಾಕ್, ಕಲೀಮ್ ಉಲ್ಲಾ ಇದ್ದರು.
ಹಣ ದುರ್ಬಳಕೆ
ಚನ್ನಗಿರಿ: ತಾಲೂಕಿನ ಹಲವು ಗ್ರಾಪಂಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸುವ ತೆರಿಗೆ ಹಣವನ್ನು ಗ್ರಾಪಂ ನಿಧಿಗೆ ಪಾವತಿಸದೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌ. ಹಾಲೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಗ್ರಾಪಂ ೆರಿಗೆ ಹಣ ದುರ್ಬಳಕೆ ಆಗುತ್ತಿರುವ ಬಗ್ಗೆ ಮಾಹಿತಿ ಹಕ್ಕಿನಲ್ಲಿ ದಾಖಲೆಗಳನ್ನು ಪಡೆದುಕೊಂಡಿದ್ದು, ದುರುಪಯೋಗ ಆಗಿರುವುದು ದಾಖಲೆಗಳಿಂದ ತಿಳಿದಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ತಾಪಂ ಕಾರ್ಯನಿರ್ವಾಹಣಾಧಿಕಾರಿಯವರಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಅಧಿಕಾರಿಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಿದಾಗ, ಗ್ರಾಪಂ ಅಧಿಕಾರಿಗಳು ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಸತ್ಯವಿದ್ದು, ನಾನು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ವಿವರ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com