'ಸರ್ಕಾರದಿಂದ ಮಠಗಳಿಗೆ ಏನೂ ಬೇಡ'

Updated on: 

ಕನ್ನಡಪ್ರಭ ವಾರ್ತೆ, ಚನ್ನಗಿರಿ, ಮಾ.2
ಸರ್ಕಾರದಿಂದ ಮಠಗಳು ಏನನ್ನೂ ಬಯಸಬಾರದು. ಸರ್ಕಾರದಿಂದ ಮಠಗಳಿಗೆ ಬರುವ ಹಣವೂ ಬೇಡ ಎಂದು ಇಲ್ಲಿನ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಜಯದೇವ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಸಂಜೆ ಇಲ್ಲಿನ ಹಿರೇಮಠದಲ್ಲಿ 14ನೇ ವರ್ಷದ ಕೊಟ್ಟುರೇಶ್ವರ ಸ್ವಾಮಿಯ ಪಾದಯಾತ್ರೆ ಮತ್ತು ಹಿರೇಮಠದ ಶ್ರೀ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳವರ ಎರಡನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸತ್ಯ-ಶುದ್ದ ಕಾಯಕವನ್ನು ಮಾಡಿ ಉಳಿದಿದ್ದನ್ನು ದಾನ ಮಾಡುವ ಭಕ್ತರು ಇದ್ದಾರೆ ಅಂತಹ ಭಕ್ತರಲ್ಲಿ ಜೋಳಿಗೆ ಹಿಡಿದು ಕೇಳಿದರೆ ಸಾಕು ಮಠದ ಅಭಿವೃದ್ದಿಗೆ ಬೇಕಾದ ಸಂಪನ್ಮೂಲ ಸಿಗುವುದು ಎಂದರು.
ಭ್ರಷ್ಟರ ಬಗ್ಗೆ ಎಚ್ಚರಿಕೆ: ಪ್ರತಿನಿಧಿಗಳು ಅಕ್ರಮ ಸಂಪತ್ತನ್ನು ಗಳಿಸಲು ಹೊರಟಿದ್ದಾರೆ. ಅಂತವರ ಬಗ್ಗೆ ಎಚ್ಚರದಿಂದ ಇರಬೇಕು. ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯುವ ಯುವ ರಾಜಕಾರಣಿಗಳು ಈ ದೇಶದ ಸಂರಕ್ಷಣೆ, ಸಂಸ್ಕೃತಿ ಮತ್ತು ದೈವತ್ವವನ್ನು ಕಾಪಾಡಿಕೊಂಡು ಭ್ರಷ್ಟಾಚಾರವನ್ನು ತೊಲಗಿಸಲು ಮುಂದಾಗಬೇಕು ಎಂದರು.
ಸಮಾರಂಭದ ಉದ್ಘಾಟನೆಯನ್ನು ತಾಲೂಕು ಜೆಡಿಎಸ್ ಅಧ್ಯಕ್ಷ ಹೊದಿಗೆರೆ ರಮೇಶ್ ನೆರವೇರಿಸಿ ಮಾತನಾಡಿದರು.
 ಉಪದೇಶಾಮೃತವನ್ನು ಕೊಟ್ಟೂರು ಕಟ್ಟೆಮನೆ ಹಿರೇಮಠದ ಶ್ರೀ ಯೋಗಿ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಎರಗುಂಟೆ ಕರಿಬಸವೇಶ್ವರ ಗದ್ದಿಗೆ ಮಠದ ಪರಮೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಸಮಾರಂಭದ ನೇತೃತ್ವವನ್ನು ಶ್ರಿ ಮಠದ ಶ್ರೀ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಪ್ರಾಸ್ತಾವಿಕವಾಗಿ ಟಿ.ಎಂ.ಓಂಕಾರಪ್ಪ ಮಾತನಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com