ಇಂದು ವಿದ್ಯಾರ್ಥಿ ಮಿತ್ರ ಲೋಕಾರ್ಪಣೆ
ಕಸಾಪ ಜಿಲ್ಲಾ ಘಟಕ, ವಿವೇಕ ಪ್ರಕಾಶನ ಸಂಸ್ಥೆಯಿಂದ ಮಂಜುನಾಥ ಸಿ. ಸಾಹುಕಾರ್ರ ವಿದ್ಯಾರ್ಥಿ ಮಿತ್ರ ಕೃತಿ ಲೋಕಾರ್ಪಣೆ ಸಮಾರಂಭ ಮಾ.3ರಂದು ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಪ್ರೊ. ಎಸ್.ಎಚ್. ಪಟೇಲ್ ಅಧ್ಯಕ್ಷತೆಯಲ್ಲಿ ಡಿಡಿಪಿಐ ಡಿ.ಕೆ. ಶಿವಕುಮಾರ ಕೃತಿ ಲೋಕಾರ್ಪಣೆ ಮಾಡುವರು. ನೂತನ ಬಿಇಡಿ ಕಾಲೇಜು ಪ್ರಾಚಾರ್ಯ ಡಾ.ಎಚ್.ವಿ. ಶಿವಶಂಕರ, ಬಾ.ಮ. ಬಸವರಾಜಯ್ಯ, ಜಗಳೂರು ಬಿಇಓ ಬಿ. ಸಿದ್ದಪ್ಪ, ಜಗಳೂರು ಪಿಯು ಕಾಲೇಜು ಪ್ರಾಚಾರ್ಯ ಎಸ್. ಚನ್ನಬಸಪ್ಪ ಇತರರು ಭಾಗವಹಿಸಲಿದ್ದಾರೆ.
ಇಂದು ಶರಣ ಸಂಗಮ ಕಾರ್ಯಕ್ರಮ
ಪವಾಡ ಪುರುಷರು ಮತ್ತು ಪ್ರತಿಭಾವಂತರು ವಿಷಯವಾಗಿ ಶರಣ ಸಂಗಮ ಕಾರ್ಯಕ್ರಮ ಮಾ.3ರಂದು ದಾವಣಗೆರೆ ಶ್ರೀ ಶಿವಯೋಗಾಶ್ರವುದಲ್ಲಿ ನಡೆಯಲಿದೆ. ಅಂದು ಸಂಜೆ 6.30ಕ್ಕೆ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಶರಣರ ಅಧ್ಯಕ್ಷತೆಯಲ್ಲಿ ಚನ್ನಗಿರಿ, ದಾವಣಗೆರೆ ವಿರಕ್ತ ಮಠದ ಜಯದೇವ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ ಸಮ್ಮುಖದಲ್ಲಿ ಹಾವೇರಿ ಹೊಸಮಠ ಬಸವೇಶ್ವರ ಶಿಕ್ಷಣ ಮಹಾ ವಿದ್ಯಾಲಯದ ಬೋಧಕ ಎಸ್.ವಿ. ಚಿಟ್ಟಿ ಉಪನ್ಯಾಸ ನೀಡುವರು. ಬಿಇಓ ಬಿ.ಸಿ. ಸಿದ್ದಪ್ಪ ಭಾಗವಹಿಸುವರು. ಬಸವ ಕಲಾ ಲೋಕ ವಚನ ಸಂಗೀತ ನಡೆಸಿ ಕೊಡಲಿದೆ.
ಲಿಂ. ಸದ್ಯೋಜಾತ ಸ್ಮರಣೋತ್ಸವ
ದಾವಣಗೆರೆ ಹಿರೇಮಠದ ಲಿಂ. ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ 5ನೇ ಸ್ಮರಣೋತ್ಸವ ಕಾರ್ಯಕ್ರಮ ಎಂಸಿಸಿ ಬಿ ಬ್ಲಾಕ್ನ ಶ್ರೀಮಠದಲ್ಲಿ 2ನೇ ದಿನದ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಸಂಜೆ 6.30ಕ್ಕೆ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರೊ ಎಸ್.ಎಚ್. ಪಟೇಲ್ ಅಧ್ಯಕ್ಷತೆಯಲ್ಲಿ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಎಸ್.ಎಂ. ಹಿರೇಮಠ, ಚಂಪಾಲಾಲ್ ಜೈನ್ ಭಾಗವಹಿಸುವರು. ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮಠದ ಕಾರ್ಯದರ್ಶಿ, ಹಿರಿಯ ಪ್ರಾಧ್ಯಾಪಕ ಡಾ. ತ್ರಿಭುವನಾನಂದಸ್ವಾಮಿ ಕೋರಿದ್ದಾರೆ.