ದಾವಣಗೆರೆ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವನಿತಾ ಉತ್ಸವವನ್ನು ಮಾ.8ರಂದು ದಾವಣಗೆರೆ ವನಿತ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6ಕ್ಕೆ ವನಿತಾ ಸಮಾಜದ ರಂಗ ಮಂದಿರದಲ್ಲಿ ಮಾಜಿ ಸಚಿವೆ, ಸಂಸ್ಥೆ ಗೌರವಾಧ್ಯಕ್ಷೆ ಡಾ. ನಾಗಮ್ಮ ಕೇಶವಮೂರ್ತಿ ಅಧ್ಯಕ್ಷತೆಯಲ್ಲಿ ವಿಜಾಪುರ ಮಹಿಳಾ ವಿವಿ ವಿಶ್ರಾಂತ ಕುಲಪತಿ ಗೀತಾ ಬಾಲಿ ಕಾರ್ಯಕ್ರಮ ಉದ್ಘಾಟಿಸುವರು. ಚ.ವಿ.ಧ. ಟ್ರಸ್ಟ್ ಅಧ್ಯಕ್ಷ ಚನ್ನಗಿರಿ ವಿರುಪಾಕ್ಷಪ್ಪ ವನಿತಾ ಸೇವಾ ಪ್ರಶಸ್ತಿ ಪ್ರದಾನ ಮಾಡುವರು. ಅದೇದಿನ ಬೆಳಿಗ್ಗೆ 10ಕ್ಕೆ ರಂಗೋಲಿ ಸ್ಪರ್ಧೆ ಇದೆ ಎಂದು ಅಧ್ಯಕ್ಷೆ ಅಮಿತಾ ಪೈ, ಕಾರ್ಯದರ್ಶಿ ಮೀನಾ ಪ್ರಭಾಕರ ತಿಳಿಸಿದ್ದಾರೆ.
ನಾಳೆ ಮಹಿಳಾ ದಿನಾಚರಣೆ
ದಾವಣಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಮಾ.8ರಂದು ಏರ್ಪಡಿಸಲಾಗಿದೆ. ಅಂದು ಮಧ್ಯಾಹ್ನ 3ಕ್ಕೆ ಕಾಲೇಜು ಪ್ರಾಚಾರ್ಯ ಡಾ. ಡಾ. ಎಚ್.ವಿ. ವಾಮದೇವಪ್ಪ ಅಧ್ಯಕ್ಷತೆಯಲ್ಲಿ ಮಾಂಟೆಸ್ಸೊರಿ ಕಾನ್ವೆಂಟ್ ಶಾಲೆ ಆಡಳಿತಾಧಿಕಾರಿ, ನಿವೃತ್ತ ಕನ್ನಡ ಬೋಧಕರಾದ ಎಸ್.ಎಂ. ಮಲ್ಲಮ್ಮ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕಾಲೇಜು ಬೋಧಕ- ಬೋಧಕೇತರ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಭಾಗವಹಿಸುವರು ಎಂದು ಪ್ರಕಟಣೆಯು ತಿಳಿಸಿದೆ.
9ಕ್ಕೆ, ಜಿಎಂಐಟಿ ಅಲುಮ್ನಿ ಮೀಟ್
ದಾವಣಗೆರೆ ಜಿಎಂಐಟಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಗಮ ಅಲುಮ್ನಿ ಮೀಟ್- 2013 ಮಾ.9ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 11ಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ, ಬೆಂಗಳೂರಿನ ಎಲ್.ಎಸ್. ಉಮೇಶ, ಎಚ್.ಎನ್. ಕಿರಣಕುಮಾರ ಪಾಲ್ಗೊಳ್ಳಲಿದ್ದು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಲಿಂಗರಾಜ ಅಧ್ಯಕ್ಷತೆ ವಹಿಸುವರು. ಹಳೆ ವಿದ್ಯಾರ್ಥಿಗಳು ತಮ್ಮ ನೆನಪು, ಅನುಭವ ಹಂಚಿಕೊಳ್ಳುವರು ಎಂದು ಆಡಳಿತಾಧಿಕಾರಿ ವೈ.ಯು. ಸುಭಾಷ್, ಪ್ರಾಚಾರ್ಯ ಡಾ. ಎಸ್.ಜಿ. ಹಿರೇಮಠ, ವಿವಿಧ ವಿಭಾಗ ಮುಖ್ಯಸ್ಥರು, ಬೋಧಕರು ತಿಳಿಸಿದ್ದಾರೆ.