ಅರ್ಕಾವತಿ ಹಗರಣ: ಸಿಎಂ ರಾಜಿನಾಮೆಗೆ ಒತ್ತಾಯ

Updated on: 

.ಪ್ರ.ವಾರ್ತೆ, ದಾವಣಗೆರೆ, ಆ.1ಒಂದು ಗುಂಟೆ ಜಮೀನನ್ನೂ ಡಿನೋಟಿಫಿಕೇಷನ್ ಮಾಡಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯನವರ ಮತ್ತೊಂದು ದು ಮುಖ ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಪ್ರಕರಣದ ಮೂಲಕ ಬಯಲಾಗಿದ್ದು, ನೈತಿಕ ಹೊಣೆಹೊತ್ತು ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಕಾವತಿ ಬಡಾವಣೆಯ 541 ಎಕರೆ ಡಿನೋಟಿಫಿಕೇಷನ್‌ಗೆ ರೀ ಡೂ ಎಂಬುದಾಗಿ ಬರೆಯುವ ಮೂಲಕ ಸಿಎಂ ಸಿದ್ದರಾಮಯ್ಯ ಡಿ ನೋಟಿಫಿಕೇಷನ್ ಮಾಡಿದ್ದು, ಜಗಜ್ಜಾಹೀರಾಗಿದ್ದು, ಮೌಲ್ಯಯುತ ರಾಜಕಾರಣಿಯೆಂಬುದಾಗಿ ನಾವೆಲ್ಲರೂ ತಿಳಿದಿದ್ದ ಸಿದ್ದರಾಮಯ್ಯ ಮತ್ತೊಂದು ಮುಖ ಬಯಲಾಗಿದೆ ಎಂದರು.ಈಗ ಶೆಟ್ಟರ್ ಸಾಕ್ಷಾಧಾರ ಸಹಿತ ಹಗರಣ ಬಯಲಿಗೆ ತರುತ್ತಿದ್ದಂತೆಯೇ ಒಪ್ಪಿಕೊಳ್ಳುತ್ತಿದ್ದಾರೆ. ಶೆಟ್ಟರ್ ಕಾಲದ್ದಷ್ಟೇ ಅಲ್ಲ, ಹಿಂದೆ ಎಸ್.ಎಂ. ಕೃಷ್ಣ ಕಾಲದಲ್ಲಿ ಆಗಿದ್ದ ಸಾವಿರಾರು ಕೋಟಿ ರು. ಮೌಲ್ಯದ ರು. 4,000 ಎಕರೆ ಡಿನೋಟಿಫಿಕೇಷನ್ ಪ್ರಕರಣದ ಬಗ್ಗೆಯೂ ಸರ್ಕಾರ ತನಿಖೆ ನಡೆಸಲಿ. ಸಿದ್ದರಾಮಯ್ಯ ಸವಾಲು ಹಾಕಿದ್ದಂತೆ ಶೆಟ್ಟರ್ದಾಖಲೆ ಹಾಜರುಪಡಿಸಿದ್ದು, ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದರು.ಕೃಷ್ಣ ಕಾಲದಿಂದಲೂ ತನಿಖೆ ಆಗಲಿ: ರಾಜ್ಯದಲ್ಲಿ 1999ರಿಂದ ವಿದ್ಯುತ್ ಖರೀದಿಯಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. ಆಗನಿಂದ 2014ರವರೆಗಿನ ವಿದ್ಯುತ್ ಖರೀದಿ ಬಗ್ಗೆ ಸಮಗ್ರ ತನಿಖೆ ನಡೆಸಲು ಸಿಎಂ ಕ್ರಮ ಕೈಗೊಳ್ಳಲಿ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಅಣಬೇರು ಜೀವನಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ಎನ್. ಶಿವಕುಮಾರ, ಮುಖಂಡ ಬಿ.ಎಸ್. ಜಗದೀಶ, ಕೆ. ಹೇಮಂತಕುಮಾರ, ಕಕ್ಕರಗೊಳ್ಳ ಕೆ.ಪಿ. ಕಲ್ಲಿಂಗಪ್ಪ, ಎಂ. ಆರ್. ಮಹೇಶ, ಕೂಲಂಬಿ ಬಸವರಾಜ, ರಾಜು ಮೊದಲಾದವರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com