ಹರಿಹರ: ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಮಾಜಿ ಸಚಿವ ಎಚ್.ಶಿವಪ್ಪ ಅವರ ಸಮಾಧಿ ಸ್ಥಳದಲ್ಲಿ ಪ್ರಥಮ ವರ್ಷದ ಭಾವಪೂರ್ವ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಸಿದ್ದಲಿಂಗಶ್ರೀ, ಹುಟ್ಟು ಸಹಜ, ಸಾವು ನಿಶ್ಚಿತ. ಯಾರು, ಹುಟ್ಟು ಮತ್ತು ಸಾವಿನ ಮಧ್ಯದ ಜೀವನವನ್ನು ಜನ ಕಲ್ಯಾಣಕ್ಕಾಗಿ ಉಪಯೋಗಿಸುತ್ತಾರೋ ಅವರು ಶ್ರೇಷ್ಠರಾಗುತ್ತಾರೆ ಎಂದು ಉಪದೇಶ ನೀಡಿದರು.
ಸಮಾಧಿ ಸ್ಥಳದ ಗದ್ದುಗೆಗೆ ಶಿವಪ್ಪ ಅವರ ಸಹೋದರರು ಹಾಗೂ ಕುಟುಂಬದ ಸದಸ್ಯರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ವಾಲ್ಮೀಕಿ ಸಂಸ್ಥಾನದ ಪ್ರಸನ್ನಾನಂದ ಸ್ವಾಮೀಜಿ, ವನಮಾಲ ಎಚ್.ಶಿವಪ್ಪ, ಶಾಸಕ ಎಚ್.ಎಸ್. ಶಿವಶಂಕರ್, ಎಚ್.ಎಸ್. ಅರವಿಂದ್. ಎಚ್.ಎಸ್. ನಾಗರಾಜ್, ಚೇತನಾ ಶ್ರೀಕಂಠಸ್ವಾಮಿ, ಎಚ್.ಚಂದ್ರಪ್ಪ, ಎಚ್.ಹನುಮಗೌಡ, ಡಿ.ಎಂ. ಹಾಲಸ್ವಾಮಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಸಿಪಿಐ ಪಂಪನಗೌಡ, ಪಿಎಸ್‌ಐ ಗಳಾದ ಎಚ್. ಸುನಿಲ್‌ಕುಮಾರ್ ಹಾಗೂ ಎಂವಿ. ಮೇಘರಾಜ್ ಭಾಗವಹಿಸಿದ್ದರು.
Advertisement