ಹರಪನಹಳ್ಳಿ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಎಂ.ಆರ್. ನಾಗರಾಜ್ ಅಧ್ಯಕ್ಷತೆಯ ಸಿದ್ಧತಾ ಸಭೆಯಲ್ಲಿ ನಿರ್ಧಾರ
ಹರಪನಹಳ್ಳಿ: ಇದೇ ಪ್ರಥಮ ಬಾರಿಗೆ ಆ. 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಮೆರಗು ನೀಡಲು ಗ್ರಾಮೀಣ ಕ್ರೀಡೆ ಹಮ್ಮಿಕೊಳ್ಳಲು ಮಂಗಳವಾರ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ ಎಂ.ಆರ್. ನಾಗರಾಜ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸ್ವಾತಂತ್ರ್ಯ ದಿನಾಚರಣೆ ಒಂದು ದಿನ ಮುಂಚಿತವಾಗಿ ಅಂದರೆ ಆ. 14ರಂದು ಪದವಿ ವಿದ್ಯಾರ್ಥಿಗಳಿಗೆ ಮಡಿಕೆ ಒಡೆಯುವ ಸ್ಪರ್ಧೆ, ಪತ್ರಕರ್ತರು ಹಾಗೂ ಸರ್ಕಾರಿ ನೌಕರರ ಚಿನ್ನಿದಂಡ ಹಾಗೂ ಲಗೋರಿ, ಶಿಕ್ಷಣ ಇಲಾಖೆಯ ನೌಕರರಿಗೆ ಸ್ಪೂನ್ ಲಿಂಬೆ ಹಣ್ಣಿನ ನಡಿಗೆ ಹಾಗೂ ಹಗ್ಗ ಜಗ್ಗಾಟ ಈ ರೀತಿ ಗ್ರಾಮೀಣ ಕ್ರೀಡೆ ಆಯೋಜಿಸಲು ಸಭೆ ತೀರ್ಮಾನ ಕೈಗೊಂಡಿತು.
ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಸಹ ತೀರ್ಮಾನಿಸಲಾಯಿತು. ಪಿಯು ವಿದ್ಯಾರ್ಥಿಗಳಿಗೆ ಸಮೂಹ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಕುರಿತು ಭಾಷಣ ಸ್ಪರ್ಧೆ, ಪದವಿ ವಿದ್ಯಾರ್ಥಿಗಳಿಗೆ ಮಹಿಳಾ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ನಿಯಂತ್ರಣ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ವೀರಭದ್ರಯ್ಯ, ಕಂಚಿಕೇರಿ ಬಾಸ್ಕರಾಚಾರ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಲಮರಸಿಕೇರಿ ಚೆನ್ನಬಸಪ್ಪ ದಳವಾಯಿ, ನಿಲಯ ಮೇಲ್ವಿಚಾರಕ ಬಿ.ಎಚ್. ಚಂದ್ರಪ್ಪ, ಮಾದಿಹಳ್ಳಿ ಗ್ರಂಥಾಲಯದ ಮೇಲ್ವಿಚಾರಕ ಎಂ.ಕೆ.ನಾಗಪ್ಪ, ಹಿರಿಯ ಪತ್ರಕರ್ತ ಬಿ. ಮಾಧವರಾವ್ ಅವರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.
ಪಟ್ಟಣದ ಹೋಟೆಲ್ ಮಾಲೀಕರು ಮಕ್ಕಳಿಗೆ ಸಿಹಿ ವಿತರಿಸಲು ಒಪ್ಪಿಕೊಂಡರು. ತಾಪಂ ಇಒ ರೇವಣ್ಣವರ್, ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಬಿಇಒ ಸಿ.ರಾಮಪ್ಪ, ಆರೋಗ್ಯಾಧಿಕಾರಿ ರೇಣುಕಾರಾಧ್ಯ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ.ರಾಮಪ್ರಸಾದ್ ಗಾಂಧಿ, ಜಿಲ್ಲಾ ಕಾರ್ಯದರ್ಶಿ ಎಚ್. ಮಲ್ಲಿಕಾರ್ಜುನ, ನಿಚ್ಚವನಹಳ್ಳಿ ಭೀಮಪ್ಪ, ಸಮಾಜ ಕಲ್ಯಾಣಾಧಿಕಾರಿ ತಿಪ್ಪೇಸ್ವಾಮಿ, ಬಿಸಿಎಂ ವಿಸ್ತರಣಾಧಿಕಾರಿ ಪರಮೇಶ್ವರಪ್ಪ ಹದಡಿ, ಬೆಸ್ಕಾಂ ಎಇಇ ಭೀಮಪ್ಪ, ಡಾ. ವೇಣುಗೋಪಾಲ ದೇಶಪಾಂಡೆ, ಪಿಎಸ್‌ಐ ವಸಂತ ಅಸೋದೆ, ಸಾರಿಗೆ ಡಿಪೋ ವ್ಯವಸ್ಥಾಪಕ ವೆಂಕಟೇಶ, ಬಸವರಾಜಯ್ಯ, ಇಸ್ಮಾಯಿಲ್ ಎಲಿಗಾರ, ಪಶು ಇಲಾಖೆಯ ವೆಂಕಾರೆಡ್ಡಿ ಇದ್ದರು.
Advertisement