ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ವಿದ್ಯೆಯೇ ದೊಡ್ಡ ಸಂಪತ್ತಾಗಿದ್ದು, ಇಂತಹ ಸಂಪತ್ತಿನ ಒಡೆಯರಾಗಲು ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಶ್ರದ್ಥೆಯಿಂದ ಓದಿ, ಉನ್ನತ ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ತೊಗಟವೀರ ಸಮಾಜದ ಗುರುಗಳಾದ ದಿವ್ಯ ಜ್ಞಾನಾನಂದ ಸ್ವಾಮೀಜಿ ಕರೆ ನೀಡಿದರು.
ನಗರದ ತೊಗಟವೀರ ಸಮುದಾಯ ಭವನದಲ್ಲಿ ವನದಲ್ಲಿ ಚೌಡೇಶ್ವರಿ ದೇವಸ್ಥಾನ ಸಮಿತಿ, ತೊಗಟವೀರ ಸಮಾಜ ದಾವಲ್ ಪೇಟೆ, ತೊಗಟವೀರ ಸಮಾಜ ಸೇವಾ ಸಮಿತಿ ಟ್ರಸ್ಟ್ ಹಮ್ಮಿಕೊಂಡಿದ್ದ ಶ್ರೀ ಚೌಡೇಶ್ವರಿ ಅಮ್ಮನವರ ಶ್ರಾವಣ ಮಾಸದ ರಥೋತ್ಸವ ಹಾಗೂ ಉಯ್ಯಾಲೆ ಸೇವೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
ಸಮಿತಿ ಅಧ್ಯಕ್ಷ ಎಲ್.ಟಿ. ಜಗನ್ನಾಥ ಮಾತನಾಡಿ, ಸಾಧಿಸುವ ಛಲ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಬರಬೇಕು. ಪಾಲಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಿಸುವ ಬದಲಿಗೆ, ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನು ಸಮಾಜ, ದೇಶದ ಆಸ್ತಿಯಾಗಿ ರೂಪಿಸಬೇಕು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಬಿ. ಆಂಜನೇಯ, ಉಪಾಧ್ಯಕ್ಷ ಎಲ್.ಟಿ. ದ್ವಾರಕನಾಥ್, ಕಾರ್ಯದರ್ಶಿ ಡಿ.ಡಿ. ಬಸವರಾಜಪ್ಪ, ಹಾಸ್ಟೆಲ್ ಸಮಿತಿ ಅಧ್ಯಕ್ಷ ಎನ್.ಅಶ್ವತ್ಥ ನಾರಾಯಣ, ಹಿರಿಯ ಮಹಿಳಾ ಟ್ರಸ್ಟಿ ನಾಗರತ್ನಮ್ಮ, ಸಹ ಕಾರ್ಯದರ್ಶಿ ಜಿ.ಟಿ. ರಂಗಪ್ಪ, ಖಜಾಂಚಿ ಎಚ್. ರಾಮಣ್ಣ, ಎಚ್. ರಾಮಚಂದ್ರ, ಎನ್. ಸತೀಶ, ಬಿ.ಎಚ್. ಬಾಲಕೃಷ್ಣ, ಎನ್.ಎಚ್. ಕೆಂಚಪ್ಪ, ಎನ್. ಗೋದೇಶಪ್ಪ, ಚೌಡಪ್ಪ, ಎಚ್. ಅನಂತ, ಜೆ.ಟಿ. ರಂಗಪ್ಪ, ಹಿರೇಬಿದ್ರಿ ಎಚ್. ರಾಮಪ್ಪ ಇತರರು ಇದ್ದರು. ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.
Advertisement