ಫ್ಯಾನ್ ಬಂದ್ ಚಳವಳಿ ವಾಪಸ್

Updated on: 

ಹೊನ್ನಾಳಿ: ಜು.7 ರ ಸೋಮವಾರ ನಡೆಸಲು ಉದ್ದೇಶಿಸಿದ್ದ ತಾಲೂಕಿನ ನೇರಲಗುಂಡಿ ಗುಡ್ಡದಲ್ಲಿರುವ ಪವನ ವಿದ್ಯುತ್ ಫ್ಯಾನ್‌ಗಳನ್ನು ಬಂದ್ ಮಾಡುವ ಚಳವಳಿಯನ್ನು  ಹಿಂದಕ್ಕೆ ಪಡೆಯಲಾಗಿದೆ ಎಂದು ಹಸಿರು ಸೇನೆ ಅಧ್ಯಕ್ಷ ಭರ್ಮಪ್ಪ ಮಾಸಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಆರ್‌ಬಿ ಕಂಪನಿಯವರು ಗುಡ್ಡಕ್ಕೆ ಬೆಂಕಿ ಹಾಕಿದ್ದ ಸಂದರ್ಭದಲ್ಲಿ 5 ಎಕರೆಯಲ್ಲಿದ್ದ 3 ವರ್ಷದ ಅಡಕೆ ಗಿಡಗಳು ಪೂರ್ಣವಾಗಿ ಸುಟ್ಟು, 150 ರಿಂದದ 200 ಕ್ವಿಂಟಲ್  ಮೆಕ್ಕೆ ಜೋಳ ಹಾಗೂ ಹನಿ ನೀರಾವರಿ ಡ್ರಿಪ್ ಪೈಪ್‌ಲೈನ್ ಸಂಪೂರ್ಣ ಸುಟ್ಟು ಹೋಗಿ ಸಾಕಷ್ಟು ನಷ್ಟ ಸಂಭವಿಸಿದ ಘಟನೆ ಜರುಗಿತ್ತು ಎಂದರು.
ರೈತರನ್ನು ಅಲೆದಾಡುಸುತ್ತಿದ್ದರಿಂದ ರೋಸಿಹೋದ ತಾಲೂಕು ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪವನ ವಿದ್ಯುತ್ ಯಂತ್ರಗಳನ್ನು ಬಂದ್ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದರು.  
ಡಿವೈಎಸ್ಪಿ ನೇಮಗೌಡ, ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸೈ ಸುನಿಲ್‌ಕುಮಾರ್ ಹಾಗೂ ರೈತ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿದ ನಂತರ ಪರಿಹಾರವನ್ನು ಸ್ಥಳದಲ್ಲೇ ನೀಡಿದ್ದರಿಂದ ಪ್ರತಿಭಟನೆ ಕೈ ಬಿಡಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com