ದಾವಣಗೆರೆ: ಬ್ಯಾಗ್ನಲ್ಲಿಟ್ಟಿದ್ದ ಲ್ಯಾಪ್ಟಾಪ್ 3 ಬಾರಿ ಸ್ಫೋಟಗೊಂಡ ಪರಿಣಾಮ ಮನೆ ಗೋಡೆ ಬಿರುಕು ಬಿಟ್ಟಿದ್ದಲ್ಲದೆ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಜಯನಗರದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಜಯನಗರ ಬಿ ಬ್ಲಾಕ್ ವಾಸಿ, ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ.ಮಲ್ಲಿಕಾರ್ಜುನ ಕಲಮರಹಳ್ಳಿ ನಿವಾಸದಲ್ಲಿ ಲ್ಯಾಪ್ಟಾಪ್ ಸ್ಫೋಗೊಂಡಿದೆ. ಪರಿಣಾಮ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ. ಪ್ರಾಚಾರ್ಯ ಪ್ರೊ. ಕಲಮರಹಳ್ಳಿ ಪುತ್ರ ಕೆ.ಎಂ. ಸುಜನ್ ಮೂಡಬಿದರೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದು, ರಜೆಯೆಂದು ಮನೆಗೆ ಬಂದಿದ್ದರು. ಲ್ಯಾಪ್ಟಾಪ್ನಲ್ಲಿ ತಮ್ಮ ಕೆಲಸ ಮುಗಿಸಿದ ಸುಜನ್ ಬ್ಯಾಗ್ನಲ್ಲಿ ಲ್ಯಾಪ್ಟಾಪ್ ಇಟ್ಟು ಕೊಠಡಿಗೆ ಹೋಗಿ ಮಲಗಿದ್ದರು.