ದಾವಣಗೆರೆ: ಸುಂದರ ಮನೆಗೆ ಚೆಂದದ ಮೆರದು ನೀಡಲು ಅಗತ್ಯವಾದಂತಹ ಇಂಟಿರಿಯರ್ ಮತ್ತು ಫರ್ನಿಚರ್ಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಲ್ಲಿನ ಬಾಪೂಜಿ ಸಮುದಾಯ ಭವನದಲ್ಲಿ ಕಳೆದ 4 ದಿನಗಳಿಂದ ಜನದಟ್ಟಣೆಯಲ್ಲಿ ನಡೆದಿದ್ದು, ಜು. 20ರಂದು ಪ್ರದರ್ಶನ ಮತ್ತು ಮೇಳಕ್ಕೆ ಅಂತಿಮ ದಿನವಾಗಿದೆ.
ಭಾನುವಾರದವರೆಗೂ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಂಟಾಲಿಯನ್ ಡಿಸೈನರ್ ಸೋಫಾ, ಮಸಾಜರ್ ಚೇರ್, ಬೆಲ್ಜಿಯಂ ಕಾರ್ಪೇಟ್ಸ್, ಬೆಡ್ರೂಂ ಸೆಟ್ಸ್, ಡೈನಿಂಗ್ ಸೆಟ್ಸ್, ಮ್ಯಾಡ್ಯೂಲರ್ ಕಿಚನ್, ಕ್ರಾಕರಿ, ಸ್ಟ್ಯಾಂಡ್ಸ್, ಗಾರ್ಡನ್ ಫರ್ನೀಚರ್ಸ್, ವಾಲ್ ಫ್ರೇಮ್ಸ್, ಡೆಕೋರೇಟಿವ್ ಐಟಮ್ಸ್, ಆಫೀಸ್ ಫರ್ನೀಚರ್ ಸೇರಿದಂತೆ ವಿವಿಧ ರೀತಿಯ ಪ್ರದರ್ಶನ, ಮಾರಾಟ ಮೇಳವಾಗಿ ನಗರ, ಜಿಲ್ಲೆಯ ಜನರ ಗಮನ ಸೆಳೆಯುತ್ತಿದೆ. ಸುಂದರವಾದ ಮನೆಗೆ ಅಂದದ, ಚೆಂದದ ಮೆರಗನ್ನು ನೀಡುವ ಎಲ್ಲ ರೀತಿಯ ವಸ್ತುಗಳು ಪ್ರದರ್ಶನದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಅವುಗಳನ್ನು ಮಾರಾಟ ಮಾಡುತ್ತಿರುವುದು ಮೇಳದ ಮತ್ತೊಂದು ವೈಶಿಷ್ಟ್ಯ. ವಜು. 20ರ ಭಾನುವಾರದವರೆಗೂ ಪ್ರದರ್ಶನವಿದ್ದು, ಸಾರ್ವನಿಜಕು ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಸದುಪಯೋಗ ಪಡೆಯಬೇಕು ಎಂದು ಸಂಘಟಕ ಶ್ರೀಕಾಂತ್ ಅರಸ್ ಮನವಿ ಮಾಡಿದ್ದಾರೆ.