ದಾವಣಗೆರೆ: ಸಾದರ ನೌಕರರ ಬಳಗದಿಂದ ದಾವಣಗೆರೆ ನಗರ, ಗ್ರಾಮಾಂತರದ ಸಾದರ ಜನಾಂಗದ ಎಸ್ಸೆಸ್ಸೆಲ್ಸಿ, ಪಿಯುಸಿ ಕಲಾ, ವಾಣಿಜ್ಯ , ವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆ.9 ಅಂತಿಮ ದಿನ. ಅರ್ಹ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ದಾಖಲೆ ನಕಲು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಕೆ. ನಾಗಪ್ಪ, ಅಧ್ಯಕ್ಷರು, ಸಾದರ ನೌಕರ ಬಳಗ, ನಂ. 1662/59, 9ನೇ ಕ್ರಾಸ್, ವಿದ್ಯಾನಗರ, ದಾವಣಗೆರೆ(ಮೊ. 98443- 69744)ಗೆ ಸಂಪರ್ಕಿಸಬೇಕು.
ಕೆನರಾ ಬ್ಯಾಂಕ್ ಹನಗವಾಡಿ ಶಾಖೆ ಉದ್ಘಾಟನೆ
ಹರಿಹರ: ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಶನಿವಾರ ನೂತನ ಕೆನರಾ ಬ್ಯಾಂಕ್ ಶಾಖೆಯನ್ನು ಹರಿಹರ ಶಾಖೆಯ ಮುಖ್ಯ ಪ್ರಬಂಧಕ ವಿ.ನಾಗರಾಜ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಎಸ್.ಎಂ. ವೀರೇಶ್, ತಾಲೂಕು ಪಂಚಾಯತ್ ಸದಸ್ಯ ಡಿ.ಕುಮಾರ್, ಶಾಖಾ ಪ್ರಬಂಧಕ ಟಿ.ಎಚ್. ಬಸವರಾಜ, ಸಿಬ್ಬಂದಿಗಳಾದ ಶಿವಕುಮಾರ, ಕಲ್ಮೇಶ್ ಪೂಜಾರ್, ಗ್ರಾಮಸ್ಥರಾದ ಹೊಸಳ್ಳಿ ವೀರಭದ್ರಪ್ಪ, ಡಿ.ನಾಗರಾಜಪ್ಪ, ಕೆ.ಶರಣಪ್ಪ ಸ್ವಾಮಿ, ಕೆ.ಅಶೋಕ, ಎಂ.ಪ್ರಭುದೇವ, ಸಾರಥಿ ಮಂಜುನಾಥ, ಸಣ್ಣಮನೆ ಬಸವರಾಜ, ಮಾಕನೂರು ಸಿದ್ದೇಶ್, ಹನುಮಂತಗೌಡ ಇತರರು ಭಾಗವಹಿಸಿದ್ದರು.
ಆಶ್ರಯ ಸಮಿತಿಗೆ ಸದಸ್ಯರ ನೇಮಕ
ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಸದಸ್ಯರಾಗಿ, ಕೆ.ಪಿ. ರವಿ (ಧಣಿ), ಶ್ಯಾಮ ್ಡಹುಲ್ಲಮನಿ (ನಿಟುವಳ್ಳಿ), ಜರೀನಾ (ಕೆ.ಟಿ.ಜೆ.ನಗರ), ಎನ್.ರಂಗಸ್ವಾಮಿ (ಸವಿತಾ ಸಮಾಜ) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಲಾಗಿದೆ.
ಜೂಜಾಟದ ಮೇಲೆ ದಾಳಿ: ನಾಲ್ವರ ಬಂಧನ
ನಾಯಕನಹಟ್ಟಿ: ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ರು. 8190 ವಶಪಡಿಸಿ ಕೊಂಡಿದ್ದಾರೆ. ತಳುಕು ಹೋಬಳಿಯ ಗೌರಸಮುದ್ರ ಗ್ರಾಮದಲ್ಲಿ ಶುಕ್ರವಾರ ಸಂಜೆ ಜೂಜು ಆಡುತ್ತಿದ್ದ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ ನೇತೃತ್ವದಲ್ಲಿ ಎ.ಎಸ್.ಐ ರಾಮಚಂದ್ರಪ್ಪ, ಸಿಬ್ಬಂದಿ ಸತೀಶ್, ಸಿದ್ದೇಶ್, ಸುರೇಶ್ರೆಡ್ಡಿ ದಾಳಿಯಲ್ಲಿ ಭಾಗವಹಿಸಿದ್ದರು.ಪ್ರಕರಣ ತಳಕು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.