ಕಠಿಣ ಕ್ರಮಕ್ಕೆ ಆಗ್ರಹ

Updated on: 

ಹರಪನಹಳ್ಳಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ತಡೆಗಟ್ಟಲು ವಿಫಲವಾದ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ  ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಹರಿಹರ ವೃತ್ತದಿಂದ ಹೊರಟ ಪ್ರತಿಭಟನಕಾರರು ಹೊಸಪೇಟೆ ರಸ್ತೆ ಮೂಲಕ ಮಿನಿವಿಧಾನಸೌಧ ತಲುಪಿ ಬಹಿರಂಗ ಸಭೆ ನಡೆಸಿದರು. ರಾಜ್ಯದಲ್ಲಿ ದಿನೇದಿನೇ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಶಾಲಾ ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಮಹಿಳೆ ಮತ್ತು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದೆ ಭಯದ ವಾತಾವರಣ ಮೂಡಿದೆ ಎಂದು ಆರೋಪಿಸಿದರು.
   2 ತಿಂಗಳಿನಿಂದ ಅತ್ಯಾಚಾರ, ಹಿಂಸಾಚಾರ, ಸಾಕಷ್ಟು ಸಂಖ್ಯೆಯಲ್ಲಿ ಜರುಗಿದ್ದು, ರಕ್ಷಕರಾದ ಪೊಲೀಸ್ ಪೇದೆಗಳ ಮೇಲೆಯೇ ಹಲ್ಲೆ ನಡೆಯುತ್ತಿದೆ ಇಷ್ಟಾದರೂ ಸ್ಪಂದಿಸದೇ ಉಡಾಫೆಯ ಉತ್ತರವನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ಅವರ ಆಡಳಿತ ಅಸಮರ್ತತೆಗೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು. ಬೇಜವಾಬ್ದಾರಿ ಹೇಳಿಕೆ ನೀಡಿ ಕಾಲ ತಳ್ಳುತ್ತಿರುವ ಮುಖ್ಯಮಂತ್ರಿ, ಗೃಹಮಂತ್ರಿಗಳು ತಮ್ಮ ತಮ್ಮ ಸ್ಥಾನಕ್ಕೆ  ರಾಜಿನಾಮೆ ಸಲ್ಲಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಪಿ. ನಾಯ್ಕ, ಕಾರ್ಯದರ್ಶಿ ಕೆ. ರಾಘವೇಂದ್ರಶೆಟ್ಟಿ, ಮುಖಂಡ   ಗಿರಿರಾಜ ರೆಡ್ಡಿ, ಅ. ನಾಗರಾಜ, ಜಿ. ನಂಜನಗೌಡ, ಪುರಸಭಾ ಸದಸ್ಯ  ಎಂ. ಶಂಕರ, ಸತ್ಯನಾರಾಯಣ, ವಿಜಯಲಕ್ಷ್ಮಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಗಂಗಮ್ಮ ಬಾಗಳಿ ಕೊಟ್ರೇಶಪ್ಪ, ಕಣವಿಹಳ್ಳಿ ಮಂಜುನಾಥ, ವೇಣುಗೋಪಾಲ, ಪಿ. ಪ್ರಸನ್ನ, ಬೋವಿ ತಿರುಪತಿ ಮೊದಲಾದವರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com