ಹೊಸದುರ್ಗ: ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ತಾಲೂಕಿನ ಮತ್ತೋಡು ಹೋಬಳಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ಭಾನುವಾರ ಕೃಷಿ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಕೃಷಿ ಪರಿಕರ ವಿತರಿಸಿ ಅವರು ಮಾತನಾಡಿದರು.
ತಾಲೂಕಿನಾದ್ಯಾಂತ ರೈತರ ಅನುಕೂಲಕ್ಕಾಗಿ ಕೆ-ಕಿಸಾನ್ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ. ಇದು ರೈತರಿಗೆ ನೇರವಾಗಿ ಸರ್ಕಾರದ ಸಹಾಯಧನ ಕಲ್ಪಿಸುವ ವಿಧಾನ ಎಂದರು.
ಅಪರಿಚಿತರ ಸಹವಾಸ ಮಾಡದಿರಿ: ಕೆ. ಶ್ರೀನಿವಾಸ
ಹೊಳಲ್ಕೆರೆ: ರಾಜ್ಯಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಅತ್ಯಾಚಾರಗಳಂತ ಸಮಾಜ ದ್ರೋಹಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರಿಗೆ ರಕ್ಷಣೆಯನ್ನು ನೀಡಲಾಗುತ್ತದೆ ಎಂದು ಸಿಪಿಐ ಕೆ.ಶ್ರೀನಿವಾಸ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಪೊಲೀಸ್ ಇಲಾಖೆ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಅಪರಿಚಿತ ವ್ಯಕ್ತಿಗಳ ಜೊತೆಗೆ ಮಾತನಾಡಬಾರದು ಮೊಬೈಲ್ ನಂಬರ್ ನೀಡುವುದಾಗಲಿ ಪ್ರಯಾಣ ಮಾಡುವಾಗ ಅಪರಿಚಿತ ವ್ಯಕ್ತಿ ನೀಡುವ ತಿಂಡಿ ತಿನಿಸುಗಳಾಗಲಿ ಮತ್ತು ಮಾಡೆಲ್ ಉಡುಪು ಧರಿಸುವುದಾಗಲಿ ಮಾಡಬಾರದು. ಇದರಿಂದ ಕೆಲವು ಸಮಾಜಘಾತುಕ ವ್ಯಕ್ತಿಗಳಿಗೆ ನೀವೇ ಆಹ್ವಾನ ನೀಡಿದಂತೆ ಆಗುತ್ತದೆ. ನಿಮಗೆ ಲೈಂಗಿಕ ಕಿರುಕುಳ ಉಂಟಾದ ಪಕ್ಷದಲ್ಲಿ ತಕ್ಷಣ ಅಂತಹ ವ್ಯಕ್ತಿಯ ವಿರುದ್ಧ ಸಂಬಂಧಪಟ್ಟವರಿಗೆ ದೂರು ನೀಡಬೇಕು. ಶಾಲಾ- ಕಾಲೇಜಿಗೆ ಹೋಗುವಾಗ ಮತ್ತು ಬರವಾಗ ಇಬ್ಬರು ಪೊಲೀಸರನ್ನು ಗಸ್ತಿನಲ್ಲಿ ಬಿಡಲಾಗುವುದು ಎಂದರು. ಪಿಎಸ್ಐ ಎಚ್.ಎಂ. ರಂಗಸ್ವಾಮಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಶಿವರುದ್ರಪ್ಪ ಮಾತನಾಡಿದರು.