ದಾವಣಗೆರೆ: ರಾಜ್ಯದಲ್ಲಿ ಅಪ್ರಾಪ್ತೆಯರು, ವಿದ್ಯಾರ್ಥಿನಿಯರು, ಮಹಿಳೆಯರು, ವೃದ್ಧೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಕೊಲೆ, ಲೈಂಗಿಕ ದೌರ್ಜನ್ಯದಂತಹ ಪ್ರಕರಣ ತಡೆಗಟ್ಟುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ನಗರದಲ್ಲಿ ಸೋಮವಾರ ಕರ್ನಾಟಕ ಯುವಶಕ್ತಿ ವೇದಿಕೆ ಪ್ರತಿಭಟನೆ ನಡೆಸಿತು.
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ವೇದಿಕೆ ರಾಜ್ಯಾಧ್ಯಕ್ಷ ಜಿ. ಮಲ್ಲೇಶ ಇತರರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು, ಉಪವಿಭಾಗಾಧಿಕಾರಿ ಕಚೇರಿ ತಲುಪಿದರು.
ವೇದಿಕೆ ರಾಜ್ಯಾಧ್ಯಕ್ಷ ಜಿ. ಮಲ್ಲೇಶ ಮಾತನಾಡಿದರು.
ಸಂಘಟನೆ ಜಿಲ್ಲಾಧ್ಯಕ್ಷ ಪ್ರಕಾಶ ಆರ್. ಬೆಳವನೂರು, ವಿನಾಯಕ ಬೆಣ್ಣೆ, ವಿಜಯಕುಮಾರ, ಸಂತೋಷ ಆಲೂರು, ನಿಂಗರಾಜ, ಮಂಜು, ವರುಣ್, ಪ್ರಶಾಂತ, ಪ್ರದೀಪ, ಬಸವರಾಜ, ಜಗದೀಶ, ನಿರಂಜನ, ಮನೋಜ್, ಪ್ರತಾಪ್, ಶಾಂತಕುಮಾರ, ಮಹೇಶ, ಬಸವರಾಜ, ತಿಪ್ಪೇಶ, ಹಾಲೇಶ, ಕುಮಾರ, ಜೀವನ್, ವಿನಾಯಕ, ಗುರುಮೂರ್ತಿ, ರಾಜು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು. ನಂತರ ಉಪ ವಿಭಾಗಾಧಿಕಾರಿ ಡಾ. ಎಸ್. ನಾಗರಾಜ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.