ಹರಿಹರ: ಸುಮಾರು ರು. 1 ಕೋಟಿ ವೆಚ್ಚದಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯರ ವಸತಿ ನಿಲಯ ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ ಎಂದು ಶಾಸಕ ಶಿವಶಂಕರ್ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಪಾಲಿಟೆಕ್ನಿಕ್ ಕಾಲೇಜು ನಿವೇಶನದಲ್ಲಿ ಸೋಮವಾರ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ನಿಲಯಕ್ಕೆ ಈಗಾಗಲೇ ರು. 99.60ಲಕ್ಷ ಅನುದಾನ ದೊರೆತಿದೆ ಎಂದರು.
ಕಟ್ಟಡ ಕಾಮಗಾರಿ ಹೊಣೆಯನ್ನು ಕೆ.ಆರ್.ಐ.ಡಿ.ಎಲ್ ಸಂಸ್ಥೆ ಹೊತ್ತಿದ್ದು, ಮಳೆಗಾಲ ಹೊರತುಪಡಿಸಿ 6 ತಿಂಗಳ ಸಮಯಾವಕಾಶ ನೀಡಲಾಗಿದೆ. ಪಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಪರಮೇಶ್ವರಪ್ಪ, ಗೌಡರ್ನಾಯ್ಕ, ಉಜ್ಜೇಶ್, ವಿರೂಪಾಕ್ಷ, ಕಾಲೇಜು ಪ್ರಾಂಶುಪಾಲ ಜಿ.ಎ. ಶಾಂತಾರಾಮ, ರಂಗರಾಜು, ನಂಜಪ್ಪ, ಎಪಿಎಂಸಿ ಸದಸ್ಯರು ಭಾಗವಹಿಸಿದ್ದರು.