ಸೊರಬ: ಆನವಟ್ಟಿಯ ಸರ್ಕಾರಿ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್.ಟಿ. ಕರಿಬಸಪ್ಪ ರಚಿಸಿರುವ ನಿಜದನಿ ಕವನ ಸಂಕಲನ ಬಿಡುಗಡೆ ಸಮಾರಂಭ ಜು. 26 ರಂದು ನಡೆಯಲಿದೆ. ಸ್ಥಳೀಯ ಕಸಾಪ ಘಟಕ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಅಂದು ಮಧ್ಯಾಹ್ನ ಕಾಲೇಜು ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶ್ರೀಕಂಠ ಕೂಡಿಗೆ ಕೃತಿ ಬಿಡುಗಡೆ ಮಾಡುವರು. ಕಾಲೇಜು ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನೆ ನೆರವೇರಲಿದೆ ಎಂದು ಪ್ರಾಂಶುಪಾಲ ಎಚ್. ಜಯಪ್ಪ ತಿಳಿಸಿದ್ದಾರೆ.