ದಾವಣಗೆರೆ: ದೇವದಾಸಿ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಜು.24ರ ಬೆಳಗ್ಗೆ 9.45ಕ್ಕೆ ದಾವಣಗೆರೆ ರೋಟರಿ ಬಾಲಭವನದಲ್ಲಿ ನಡೆಯಲಿದೆ. ವಕೀಲರ ಸಂಘದ ಅಧ್ಯಕ್ಷ ಕೆ.ಎಚ್. ಅತಾವುಲ್ಲಾ ಖಾನ್ ಅಧ್ಯಕ್ಷತೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ. ದೀಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಧಾಕೃಷ್ಣ, ಕೆ. ಲಕ್ಷ್ಮಿನಾರಾಯಣ ಭಟ್, ಜೆ. ಮೋಕ್ಷಪತಿ ಭಾಗವಹಿಸಲಿದ್ದಾರೆ. ವಕೀಲರಾದ ಎಚ್ಚೆನ್ ಸುಧಾ, ಭಾವನಾ ಪತಂಗೆ ಉಪನ್ಯಾಸ ನೀಡುವರು. ಕರಾಮುಅನಿ, ದೇಪುಯೋ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘಗಳು ತಿಳಿಸಿವೆ.