ಬಸವಾದಿ ಪ್ರಮಥರ ಚಿಂತನೆ 27ರಂದು

Updated on: 

ದಾವಣಗೆರೆ:  ಶ್ರಾವಣ ಮಾಸದ ಅಂಗವಾಗಿ ಬಸವಾದಿ ಪ್ರಮಥರ ಚಿಂತನೆಯ ಒಂದು ತಿಂಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜು.27 ರಂದು ನಗರದ ದೊಡ್ಡಪೇಟೆಯ ವಿರಕ್ತ ಮಠದ ಆವರಣದಲ್ಲಿ ಮುರುಘರಾಜೇಂದ್ರ ವಿರಕ್ತ ಮಠದ, ಬಸವ ಕೇಂದ್ರದ ಆಶ್ರಯದಲ್ಲಿ ನಡೆಯಲಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಜು.27ರ ಸಂಜೆ 6 ಗಂಟೆಗೆ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರ ಕೃಪಾಶೀರ್ವಾದದೊಂದಿಗೆ ತಮ್ಮ ಸಾನ್ನಿಧ್ಯದಲ್ಲಿ ಪೂರ್ವವಲಯ ಪೊಲೀಸ್ ಮಹಾನಿರೀಕ್ಷಕ ಡಾ.ಎಸ್. ಪರಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ಎಸ್‌ಜೆಎಂಎಸ್ ಟ್ರಸ್ಟ್ ಸಹ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಎಂ. ಜಯಕುಮಾರ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ, ಸರ್ಕಾರಿ ಅಂಧ ಹೆಣ್ಣುಮಕ್ಕಳ ವಸತಿ ಶಾಲೆಯ ಅಧೀಕ್ಷಕ ಡಾ. ಕೆ.ಕೆ. ಪ್ರಕಾಶ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಸವ ಕಲಾ ಲೋಕದ ಅರುಣ, ವಾಗೀಶ ಹಾಗೂ ರೇವಣಸಿದ್ದಪ್ಪ ತಂಡದಿಂದ ವಚನ ಗಾಯನ ಕಾರ್ಯಕ್ರಮವಿದೆ ಎಂದು ತಿಳಿಸಿದರು.
ವಿರಕ್ತ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಜು.27 ರಿಂದ ಆ.26 ರವರೆಗೆ ಸಂಜೆ 6.30 ರಿಂದ 8 ಗಂಟೆ ವರೆಗೆ 1 ತಿಂಗಳ ಕಾಲ ಬಸವಾದಿ ಪ್ರಮಥರ ಚಿಂತನೆ ಇದೆ. ಇದೇ ಮೊದಲ ಬಾರಿಗೆ ಸ್ಥಳೀಯ ಅನುಭಾವಿಗಳಿಗೆ ವೇದಿಕೆ ಕಲ್ಪಿಸುವ ಹಾಗೂ ಏಕತಾನತೆ ದೂರಗೊ ಳಿಸುವ ಸದುದ್ದೇಶದಿಂದ ಪ್ರತಿದಿನ ಓರ್ವ ವಾಗ್ಮಿಗಳಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಜಯದೇವ ಜೋಳಿಗೆ ವಿಶೇಷ ಕಾರ್ಯಕ್ರಮ
ಜನರ ದುಶ್ಚಟಗಳನ್ನು ಭಿಕ್ಷೆ ಬೇಡುವ ಜಯದೇವ ಜೋಳಿಗೆ ಕಾರ್ಯಕ್ರಮವನ್ನು ಜು.26 ರಿಂದ ಪ್ರತಿದಿನ ನಗರದ ವಿವಿಧ ಬಡಾವಣೆಗಳಲ್ಲಿ ಹಮ್ಮಿಕೊಳ್ಳಲಾಗುವುದು. “OÚÄßÇ ನಾಗರಕೆ ಹಾಕುವ ಹಾಲು ಮಕ್ಕಳ ®ÛÅÛVÚÆ’ ಎಂಬ ಆಶಯದೊಂದಿಗೆ ಜು.30 ರಿಂದ ಹಾಲು ಕುಡಿಸುವ ಹಬ್ಬ ಹಮ್ಮಿಕೊಳ್ಳಲಾಗುವುದು.
ಆ.18 ರಿಂದ 24 ರವರೆಗೆ ಮಕ್ಕಳಿಗಾಗಿ ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ಬಸವಾದಿ ಶರಣರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆ, ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು ಎಂದರು. ಕೇಂದ್ರದ ಎಂ.ಕೆ. ಬಕ್ಕಪ್ಪ, ಎಂ.ಜಯಕುಮಾರ, ಅಂದನೂರು ಮುಪ್ಪಣ್ಣ, ಜೆ.ಸೋಮನಾಥ, ಕಣಕುಪ್ಪಿ ಮುರುಗೇಶ, ಪಲ್ಲಾಗಟ್ಟೆ ಕೊಟ್ರೇಶಪ್ಪ, ಲಂಬಿ ಮುರುಗೇಶ, ಹಾಸಬಾವಿ ಕರಿಬಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com