ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸದಸ್ಯರಾಗಿ ಕೆ.ಟಿ.ಜೆ. ನಗರದ ಹುಚ್ಚವ್ವನಹಳ್ಳಿ ಅಜ್ಜಯ್ಯ, ಆವರಗೆರೆ ಬಸವರಾಜಪ್ಪ, ಆಂಜನೇಯ ಬಡಾವಣೆಯ ಜಯಶೀಲ, ಸೊಸೈಟಿ ಎಚ್. ದುರುಗೇಶರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಉತ್ತರ ಶಾಸಕ, ಮಾಜಿ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ ಶಿಫಾರಸ್ಸಿನ ಮೇಲೆಗೆ ಸಮಿತಿಗೆ ನೂತನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ನೂತನ ಸದಸ್ಯರು ಸಮಿತಿ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ, ನಿಸ್ವಾರ್ಥದಿಂದ ಸಲ್ಲಿಸಿಕೊಂಡು ಹೋಗುವಂತೆ ಸೂಚಿಸಿ, ಸರ್ಕಾರ ನೇಮಕಾತಿ ಆದೇಶ ಹೊರಡಿಸಿದೆ.