ಸಂತೃಪ್ತ ಬಾಳಿಗೆ ಗಿಡ, ಮರ ಬೆಳೆಸಿ

Updated on: 

ದಾವಣಗೆರೆ:  ಹಸಿರು ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ದಾವಣಗೆರೆ ಮಹಾ ನಗರದ ಪ್ರತಿ ಬಡಾವಣೆಯಲ್ಲಿ ಸಸಿ ನೆಟ್ಟು, ಅವುಗಳನ್ನು ಆರೈಕೆ ಮಾಡುವ ಮೂಲಕ ಹಸಿರು ನಗರವನ್ನಾಗಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಎಸ್.ಪರಶಿವಮೂರ್ತಿ ಹೇಳಿದರು.
ನಗರದ ಸಿದ್ದವೀರಪ್ಪ ಬಡಾವಣೆಯ 11ನೇ ಕ್ರಾಸ್ ಬಳಿ ಸಿದ್ದವೀರಪ್ಪ ಬಡಾವಣೆ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ರೋಟರ್ಯಾಕ್ಟ್ ಸಂಸ್ಥೆ ದಕ್ಷಿಣದಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ತಮ್ಮ ಜಮೀನು ಗಳಲ್ಲಿ ಬೆಳೆಗಳ ಜೊತೆಗೆ 3-4 ಗಿಡ ನೆಟ್ಟು, ಅವುಗಳನ್ನು ಆರೈಕೆ ಮಾಡಲು ಗಮನ ಹರಿಸಬೇಕು ಎಂದು  ಹೇಳಿದರು.
ಸಮಿತಿ ಅಧ್ಯಕ್ಷ ಬಿ.ಚಂದ್ರಶೇಖರ ಮಾತನಾಡಿ, ಸಿದ್ದವೀರಪ್ಪ ಬಡಾವಣೆ ಹಸಿರುಮಯವಾಗಬೇಕೆಂಬ ಉದ್ದೇಶ, ಗುರಿಯನ್ನು ಸಮಿತಿ ಹೊಂದಿದೆ. ಇದೇ ಕಾರಣಕ್ಕೆ 1ನೇ ಕ್ರಾಸ್ ನಿಂದ 14ನೇ ಕ್ರಾಸ್‌ವರೆಗೆ ಸಸಿ ನೆಟ್ಟು, ಆಯಾ ಮನೆಗಳ ಮಾಲೀಕರು, ವಾಸಿಗಳಿಗೆ ಅವುಗಳನ್ನು ಆರೈಕೆ ಮಾಡುವಂತೆ ಮನವಿ ಮಾಡಲಾಗುವುದು. ಬಡಾವಣೆ ನಿವಾಸಿಗಳು ತಮ್ಮ ಮನೆ ಮುಂದೆ, ಸಮೀಪದ ಸಸಿಗಳ ಆರೈಕೆಗೆ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಎಂದರು.
ಪಾಲಿಕೆ ಸದಸ್ಯ ಜಿ.ಬಿ. ಲಿಂಗರಾಜು, ಪ್ರಗತಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಪಿ.ಸಿ. ಗಂಗಾಧರಪ್ಪ, ಸಮಿತಿಯ ಜಿ.ಬಿ. ಸತ್ಯನಾರಾಯಣ, ಬಸವರಾಜ, ಸೀತಾರಾಮಶೆಟ್ಟಿ, ಶ್ರೀನಿವಾಸ, ಸುಧೀಂದ್ರಕುಮಾರ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com