ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಫೆ. 4 ಹಾಗೂ 5ರಂದು ಶೈಕ್ಷಣಿಕ ವರ್ಷದ ಅಂತರ ಕಾಲೇಜುಗಳ ಯುವಜನೋತ್ಸವ ಏರ್ಪಡಿಸಿದೆ.
ಫೆ. 4ರಂದು ಬೆಳಗ್ಗೆ 10ಕ್ಕೆ ಯುವಜನೋತ್ಸವ ಉದ್ಟಾಟನೆಯನ್ನು ಕರ್ನಾಟಕ ಸಂಗೀತ ಮಹಾವಿದ್ಯಾಲಯದ ಪ್ರೊ. ಎಂ. ವೇಂಕಟೇಶ ನೇರವೇರಿಸಲ್ಲಿದ್ದು, ಕುಲಪತಿ ಡಾ.ಆರ್.ಆರ್. ಹಂಚಿನಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ವಿವಿ ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ಸಿ.ಎಸ್. ಹುಣಶ್ಯಾಳ ಹಾಗು ಕೃಷಿ ವಿವಿ ಡೀನ್ ಡಾ.ಎಂ.ಬಿ. ಚೆಟ್ಟಿ ಭಾಗವಹಿಸುತ್ತಾರೆ.
ಕೃಷಿ ವಿವಿಯ 5 ಮಹಾವಿದ್ಯಾಲಯದ ಏಳು ತಂಡಗಳು ಭಾಗವಹಿಸುತ್ತಿದ್ದು, ಸಂಗೀತ, ಸಾಹಿತ್ಯ, ಚಿತ್ರಕಲೆ, ಸಮೂಹ ನೃತ್ಯ, ಜಾನಪದ ನೃತ್ಯ, ರಂಗಕಲಾ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಪ್ರತಿ ತಂಡದಲ್ಲಿ 25 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ಪ್ರಚಾರ ಹಾಗೂ ಛಾಯಚಿತ್ರ ಸಮಿತಿ ಅಧ್ಯಕ್ಷ ಡಾ. ಚಿದಾನಂದ ಮನ್ಸೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.