ರಾಜ್ಯ ಮಟ್ಟದ ವಿಚಾರ ಸಂಕಿರಣ

Updated on: 

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ದೇವನೂರು ಮಹಾದೇವ-ಕ್ರಿಯೆ, ತತ್ವ ಮತ್ತು ಅಭಿವ್ಯಕ್ತಿ ಎಂಬ ವಿಷಯ ಕುರಿತು ಫೆ. 26ರಂದು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಿದೆ.  ವಿಮರ್ಶಕರು, ಚಿಂತಕರೂ ಆದ ಡಾ. ನಟರಾಜ ಹುಳಿಯಾರ್ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸುವರು.
ದೇವನೂರು ಮಹಾದೇವ ಅತಿಥಿಗಳಾಗಿ ಭಾಗವಹಿಸುತ್ತಾರೆ. ಅವರ 'ಎದೆಗೆ ಬಿದ್ದ ಅಕ್ಷರ' ಕೃತಿಯ 4ನೇ ಆವೃತ್ತಿ ಬಿಡುಗಡೆಯಾಗಲಿದೆ. ಕ್ರಿಯೆ, ತತ್ವ, ಕಥೆ ಹಾಗೂ ಕಾದಂಬರಿ ಎಂಬ ನಾಲ್ಕು ಗೋಷ್ಠಿಗಳಲ್ಲಿ ಇಂದೂಧರ ಹೊನ್ನಾಪುರ, ಡಾ.ಬಿ.ಎಂ. ಪುಟ್ಟಯ್ಯ, ಡಾ. ಸವಿತಾ ಬನ್ನಾಡಿ, ಡಾ. ನಟರಾಜ ಬೂದಾಳು ಪ್ರಬಂಧ ಮಂಡಿಸುವರು. ಸುಬ್ಬು ಹೊಲೆಯಾರ, ಮೋಹನ ನಾಗಮ್ಮನವರ, ಅಶೋಕ ಶೆಟ್ಟರ್, ಎಸ್.ಬಿ. ಜೋಗೂರ, ಡಾ.ಕುಂ.ಸಿ. ಉಮೇಶ, ಮಲ್ಲಿಕಾರ್ಜುನ ಮೇಟಿ, ಅರುಣ ಜೋಳದ ಕೂಡ್ಲಗಿ, ಅನಸೂಯಾ ಕಾಂಬಳೆ ಮತ್ತಿತರರು ವಿವಿಧ ಗೋಷ್ಠಿಗಳಲ್ಲಿ ಸಹ ಚಿಂತಕರಾಗಿ ಭಾಗವಹಿಸುವರು.  ಚಿಂತಕ ಡಾ. ರಹಮತ್ ತರೀಕೆರೆ ಸಮಾರೋಪ ಭಾಷಣ ಮಾಡುವರು. ಡಾ. ಕೆ.ಆರ್. ದುರ್ಗಾದಾಸ ಅಧ್ಯಕ್ಷತೆ ವಹಿಸುವರು. ರಂಗನಿರ್ದೇಶಕ ಡಾ. ಪ್ರಕಾಶ ಗರುಡ ನಿರ್ದೇಶನದ ದೇವನೂರ ಅವರ ಕಥೆಗಳ ರಂಗರೂಪಗಳ ಪ್ರದರ್ಶನ ಏರ್ಪಡಿಸಲಾಗಿದೆ.  ಈ ವಿಚಾರ ಸಂಕಿರಣದಲ್ಲಿ ವಿವಿಧ ವಿವಿಗಳ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಕರ್ನಾಟಕ ವಿವಿ ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಉಚಿತವಾಗಿ ಭಾಗವಹಿಸಬಹುದಾಗಿದೆ. ಆಸಕ್ತರು ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಮೊದಲು ಹೆಸರು ನೊಂದಾಯಿಸಿದ 300 ಜನ ಪ್ರತಿನಿಧಿಗಳಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗೆ ದೂ-0836 2440283 ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com