ಹುಬ್ಬಳ್ಳಿ: ಸೆಲ್ಯೂಟ್ ಹೊಡೆಯಲಿಲ್ಲ ಎಂಬ ಕಾರಣಕ್ಕೆ ಮೀಸಲು ಪಡೆಯ ಇನ್ಸ್ಪೆಕ್ಟರ್, ಹೆಡ್ ಕಾನಸ್ಟೇಬಲ್ನನ್ನು ವಾಕಿಯಿಂದ ಹೊಡೆದು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ಕಾರವಾರ ರಸ್ತೆಯಲ್ಲಿರುವ ಸಿಎಆರ್ ಹೆಡ್ಕ್ವಾರ್ಟರ್ಸ್ನಲ್ಲಿ ನಡೆದಿದೆ. ಸೆಲ್ಯೂಟ್ ಹೊಡೆಯಲು ವಿಳಂಬವಾಗಿದ್ದಕ್ಕೆ ಪೇದೆಗಳ ಸಮ್ಮುಖದಲ್ಲೇ ವಾಕಿಯಿಂದ ಹೆಡ್ ಕಾನ್ಸ್ಟೇಬಲ್ ರೇವಣಪ್ಪ ಎಸ್. ಮರಿಕೆಂಚನ್ನವರ ಅವರ ತಲೆ ಹಾಗೂ ಕೈಗೆ ಹೊಡೆದು ಆರ್ಪಿಐ ಹನಕಹಳ್ಳಿ ಅವರು ಗಾಯಗೊಳಿಸಿದ್ದಾರೆ ಎಂದು ಗೊತ್ತಾಗಿದೆ. ಇನ್ಸ್ಪೆಕ್ಟರ್ ಹಲ್ಲೆ ನಡೆಸಿದಾಗ ಅಲ್ಲಿಯೇ ಇದ್ದ ಪೊಲೀಸರು ಪೈಲ್ವಾನ್ನಾದ ಮರಿಕೆಂಚನ್ನವರನನ್ನು ಹಿಡಿದುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿತ್ತು ಎನ್ನಲಾಗಿದೆ. ಹಲ್ಲೆಯಿಂದ ಆದ ಸಣ್ಣಪುಟ್ಟ ಗಾಯಗಳಿಗೆ ಮರಿಕೆಂಚನ್ನವರ ಕಿಮ್ಸ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗಾಯಾಳು ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.