ಸಮಾವೇಶ ಮುಂದೂಡಿಕೆ

Updated on: 

ಹುಬ್ಬಳ್ಳಿ: ಫೆ. 17ರಂದು ಹುಬ್ಬಳ್ಳಿಯ ಎಪಿಎಎಂಸಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪಂಚಮಸಾಲಿ ಪೀಠಾರೋಹಣದ 5ನೇ ವಾರ್ಷಿಕೋತ್ಸವ, ಪಂಚಮಸಾಲಿ ಲಿಂಗಾಯತ ಮತ್ತು ರೈತ ಧರ್ಮ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.  ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತ ಸಮಾಜದ  ಮಹಾಂತ ಸ್ವಾಮೀಜಿ ಅವರು ಲಿಂಗೈಕ್ಯರಾದ ಕಾರಣ ಸಮಾವೇಶ ಮತ್ತು ಪೀಠಾರೋಹಣ ವಾರ್ಷಿಕೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ. ಮಾರ್ಚ್ ಮೊದಲನೇ ವಾರದಲ್ಲಿ ಈ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ಸಮಾವೇಶದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡುವ ಸಂಬಂಧ ಚರ್ಚಿಸಲಾಗುವುದು ಎಂದು ತಿಳಿಸಿದರು. ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಕಲ್ಲಪ್ಪ ಯಳಿವಾರ, ನಗರ ಘಟಕದ ಅಧ್ಯಕ್ಷ ನಂದಕುಮಾರ್ ಪಾಟೀಲ, ನವಯುವ ಘಟಕದ ಒಂಸಂಗಮೇಶ, ಶಿವನಗೌಡ ಇದ್ದರು.
ದೇಹದಾರ್ಢ್ಯ ಸ್ಪರ್ಧೆ
ಧಾರವಾಡ: ಇಲ್ಲಿನ ಕಡಪಾ ಮೈದಾನದಲ್ಲಿ ನಿಜಾಮುದ್ದೀನ್ ಶೇಖ್ ಗೆಳೆಯರ ಬಳಗ ಏರ್ಪಡಿಸಿದ್ದ 'ಮಿಸ್ಟರ್ ಶ್ರಮಜೀವಿ-13' ಉತ್ತರ ಕರ್ನಾಟಕ ದೇಹದಾರ್ಢ್ಯ ಸ್ಪರ್ಧೆಯನ್ನು ಅಖಿಲ ಭಾರತ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಸಂಸ್ಥಾಪಕ ನಂದೀಶ್ವರ ನಾಯಕ ಉದ್ಘಾಟಿಸಿದರು.  ನಿಜಾಮುದ್ದೀನ್ ಶೇಖ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ವೈದ್ಯ ಡಾ. ಕಿರಣ ಕುಲಕರ್ಣಿ, ಮೇಯರ್ ಪಾಡುರಂಗ ಪಾಟೀಲ, ಎಂ.ಆರ್. ಚನ್ನಣ್ಣವರ, ಚೇತನ ನಾಯಕ, ವಿ.ಎಂ. ಕುಂದಗೋಳ, ಬಸವರಾಜ ಜಾಧವ, ಮಂಜುಳಾ ವಾಡಕರ, ವಾದಿರಾಜ ದೇಶಪಾಂಡೆ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com