ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 14
ಸ್ಥಳೀಯ ಸಂಸ್ಥೆಗಳಿಗೆ 2007ರ ಮೀಸಲಾತಿಯಂತೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ಆದೇಶ ಹಾಲಿ ಪುರಪಿತೃರಲ್ಲಿ ಸಂತಸ ಮೂಡಿಸಿದೆ.
ವಿಧಾನಸಭೆ ಚುನಾವಣೆ ನಂತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಲ್ಲಿ ಬಹುತೇಕ ಹಾಲಿ ಪುರಪಿತೃಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತಗೊಳ್ಳುವ ಆತಂಕದಲ್ಲಿದ್ದರು. ಅಲ್ಲದೇ, ಕೆಲ ತಿಂಗಳ ಹಿಂದೆ ರೂಪಿಸಿದ್ದ ನೂತನ ಮೀಸಲಾತಿ ಪಟ್ಟಿಯೂ ಹಾಲಿ ಪುರಪಿತೃಗಳಲ್ಲಿ ಹೆಚ್ಚಿನವರು ಚುನಾವಣೆಯಿಂದ ದೂರ ಉಳಿಯುವ ಭೀತಿ ಸೃಷ್ಟಿಸಿತ್ತು.
ಆದರೆ, ಸುಪ್ರೀಂಕೋರ್ಟ್ ಆದೇಶದಂತೆ 2007ರ ಮೀಸಲಿನನ್ವಯ ಮಾ. 7ರಂದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತಿರುವುದಾಗಿ ರಾಜ್ಯ ಚುನಾವಣೆ ಆಯೋಗ ಗುರುವಾರ ಪ್ರಕಟಿಸುತ್ತಿದ್ದಂತೆಯೇ ಹಾಲಿ ಪುರಪಿತೃಗಳು ಈ ಬಾರಿಯೂ ಹಿಂದಿನ ವಾರ್ಡ್ನಿಂದಲೇ ಮತ್ತೊಮ್ಮೆ ಟಿಕೆಟ್ ಪಡೆದುಕೊಳ್ಳುವ ಪ್ರಯತ್ನ ಪ್ರಾರಂಭಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಇತ್ತೀಚೆಗೆ ಪ್ರಕಟಿಸಿದ ಮೀಸಲಾತಿ ಪಟ್ಟಿಯಿಂದ ಕಣಕ್ಕಿಳಿಯಲು ಬಯಸಿದ್ದ ಹೊಸಬರಿಗೆ ಸುಪ್ರಿಂಕೋರ್ಟ್ನ ಈ ಆದೇಶ ನಿರಾಸೆ ಮೂಡಿಸಿರುವುದರಲ್ಲಿ ಸಂದೇಹವಿಲ್ಲ.
ಲೆಕ್ಕಾಚಾರ: ಈಗಾಗಲೇ ಆಯಾ ವಾರ್ಡ್ಗಳನ್ನು ಪ್ರತಿನಿಧಿಸುತ್ತಿದ್ದ ಸದಸ್ಯರು ಈ ಬಾರಿಯೂ ತಮಗೆ ಅದೇ ವಾರ್ಡ್ನಿಂದ ಟಿಕೆಟ್ ನೀಡಬೇಕೆಂಬ ಒತ್ತಡವನ್ನು ಮುಖಂಡರ ಮೇಲೆ ಹೇರುತ್ತಿದ್ದಾರೆ. ಹೊಸ ಆಕಾಂಕ್ಷಿಗಳು ಸಹ ತಮಗೂ ಅವಕಾಶ ನೀಡಬೇಕೆಂಬ ಒತ್ತಡವನ್ನು ಪಕ್ಷದ ಮುಖಂಡರ ಮೇಲೆ ಹೇರುವ ಯೋಜನೆ ರೂಪಿಸುತ್ತಿದ್ದಾರೆ. 2007ರ ಚುನಾವಣೆಯಲ್ಲಿ ಬೆರಳೆಣಿಕೆ ಮತಗಳ ಅಂತರದಲ್ಲಿ ಸೋಲುಂಡ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಈ ಬಾರಿಯೂ ತಮಗೇ ಅವಕಾಶ ನೀಡಿದಲ್ಲಿ ಗೆಲುವು ನಿಶ್ಚಿತವೆಂಬುದನ್ನು ಮುಖಂಡರಿಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಈಗಾಗಲೇ ನಿರತರಾಗಿದ್ದಾರೆ.
ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರೂ ಹೊರತಾಗಿಲ್ಲ. ಮಹಾನಗರ ಪಾಲಿಕೆಯ 67 ವಾರ್ಡ್ಗಳನ್ನು ಪ್ರತಿನಿಧಿಸಿದ್ದ ಪುರಪಿತೃಗಳಲ್ಲಿ ಬಹುತೇಕರು ಮರಳಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹು-ಧಾ ಪಾಲಿಕೆಯಲ್ಲಿ ಸದ್ಯ 36 ಬಿಜೆಪಿ ಸದಸ್ಯರು (ಸಂ. ದಳದ ಸದಸ್ಯರೂ ಸೇರಿ), 22 ಕಾಂಗ್ರೆಸ್ ಹಾಗೂ 9 ಜೆಡಿಎಸ್ ಸದಸ್ಯರಿದ್ದು, ಇವರಲ್ಲಿ ಬಹುತೇಕರು ಮತ್ತೆ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳುವುದು ನಿಶ್ಚಿತ.
ಕಳೆದ ಅವಧಿಯಲ್ಲಿ ಆಯಾ ವಾರ್ಡ್ಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಹಾಲಿ ಸದಸ್ಯರ ಭವಿಷ್ಯ ನಿರ್ಧರಿಸಲಿವೆ. ಇದರೊಂದಿಗೆ ಕೆಜೆಪಿ ಮತ್ತು ಬಿಎಸ್ಆರ್ ಪಕ್ಷಗಳ ಅಭ್ಯರ್ಥಿಗಳೂ ಈ ಬಾರಿ ಕಣದಲ್ಲಿ ಕಾಣಿಸಿಕೊಳ್ಳುವುದರಿಂದ ಚುನಾವಣೆ ಮತ್ತಷ್ಟು ರಂಗು ಪಡೆಯಲಿದೆ.
ಹು-ಧಾ ಪಾಲಿಕೆ ಚುನಾವಣೆಗೆ 2007ರಲ್ಲಿ ನಿಗದಿಗೊಂಡಿದ್ದ ಮೀಸಲಾತಿ ಪಟ್ಟಿ
ವಾರ್ಡ್ 1 ಸಾಮಾನ್ಯ, 2 ಸಾಮಾನ್ಯ (ಮಹಿಳೆ), 3 ಪ. ಪಂಗಡ, 4 ಸಾಮಾನ್ಯ (ಮಹಿಳೆ), 5 ಹಿಂದುಳಿದ ವರ್ಗ (ಎ) (ಮಹಿಳೆ), 6 ಸಾಮಾನ್ಯ, 7 ಸಾಮಾನ್ಯ, 8 ಸಾಮಾನ್ಯ (ಮಹಿಳೆ), 9 ಸಾಮಾನ್ಯ, 10 ಹಿಂದುಳಿದ ವರ್ಗ (ಎ) (ಮಹಿಳೆ), 11 ಸಾಮಾನ್ಯ (ಮಹಿಳೆ), 12 ಸಾಮಾನ್ಯ, 13 ಸಾಮಾನ್ಯ, 14 ಹಿಂದುಳಿದ ವರ್ಗ (ಎ), 15 ಸಾಮಾನ್ಯ, 16 ಪ. ಜಾತಿ, 17 ಸಾಮಾನ್ಯ, 18 ಹಿಂದುಳಿದ ವರ್ಗ (ಬಿ), 19 ಸಾಮಾನ್ಯ (ಮಹಿಳೆ)
20 ಹಿಂದುಳಿದ ವರ್ಗ (ಬಿ), 21 ಹಿಂದುಳಿದ ವರ್ಗ (ಎ), 22 ಪ.ಪಂಗಡ (ಮಹಿಳೆ), 23 ಸಾಮಾನ್ಯ
24 ಸಾಮಾನ್ಯ, 25 ಸಾಮಾನ್ಯ, 26 ಹಿಂದುಳಿದ ವರ್ಗ (ಎ), 27 ಸಾಮಾನ್ಯ (ಮಹಿಳೆ), 28 ಸಾಮಾನ್ಯ (ಮಹಿಳೆ), 29 ಸಾಮಾನ್ಯ, 30ಹಿಂದುಳಿದ ವರ್ಗ (ಎ)
31 ಸಾಮಾನ್ಯ, 32 ಹಿಂದುಳಿದ ವರ್ಗ (ಎ) (ಮಹಿಳೆ)
33 ಸಾಮಾನ್ಯ, 34 ಹಿಂದುಳಿದ ವರ್ಗ (ಎ) (ಮಹಿಳೆ)
35 ಸಾಮಾನ್ಯ, 36 ಸಾಮಾನ್ಯ, 37 ಸಾಮಾನ್ಯ
38 ಹಿಂದುಳಿದ ವರ್ಗ (ಎ), 39 ಹಿಂದುಳಿದ ವರ್ಗ (ಎ) (ಮಹಿಳೆ), 40 ಸಾಮಾನ್ಯ, 41ಹಿಂದುಳಿದ ವರ್ಗ (ಬ), 42 ಸಾಮಾನ್ಯ, 43 ಸಾಮಾನ್ಯ, 44 ಸಾಮಾನ್ಯ
45 ಪ. ಜಾತಿ, 46 ಸಾಮಾನ್ಯ (ಮಹಿಳೆ), 47 ಸಾಮಾನ್ಯ 48 ಪ. ಜಾತಿ, 49 ಸಾಮಾನ್ಯ, 50 ಪ. ಜಾತಿ (ಮಹಿಳೆ), 51 ಸಾಮಾನ್ಯ (ಮಹಿಳೆ), 52 ಸಾಮಾನ್ಯ 53 ಹಿಂದುಳಿದ ವರ್ಗ (ಎ), 54 ಹಿಂದುಳಿದ ವರ್ಗ (ಎ) (ಮಹಿಳೆ), 55 ಸಾಮಾನ್ಯ, 56 ಹಿಂದುಳಿದ ವರ್ಗ (ಎ), 57 ಹಿಂದುಳಿದ ವರ್ಗ (ಎ), 58 ಸಾಮಾನ್ಯ (ಮಹಿಳೆ), 59 ಪ. ಜಾತಿ, 60 ಸಾಮಾನ್ಯ (ಮಹಿಳೆ), 61ಹಿಂದುಳಿದ ವರ್ಗ (ಎ), 62 ಪ. ಜಾತಿ (ಮಹಿಳೆ), 63 ಹಿಂದುಳಿದ ವರ್ಗ(ಎ), 64 ಸಾಮಾನ್ಯ (ಮಹಿಳೆ), 65 ಹಿಂದುಳಿದ ವರ್ಗ (ಎ), 66 ಹಿಂದುಳಿದ ವರ್ಗ (ಎ), 67 ಹಿಂದುಳಿದ ವರ್ಗ (ಎ) (ಮಹಿಳೆ)