ಧಾರವಾಡ: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮಾರ್ಚ್ 2, 3ರಂದು ಧಾರವಾಡದಲ್ಲಿ 'ಗೀತೋತ್ಸವ' ಹೆಸರಿನಲ್ಲಿ 10ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ ಏರ್ಪಡಿಸಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಫೆ.2ರಂದು ಬೆಳಗ್ಗೆ
9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಸೃಜನಾ ರಂಗಮಂದಿರದಲ್ಲಿ ಹಿರಿಯ ಸಾಹಿತಿ ಡಾ.ಕೆ.ಎಸ್. ನಿಸಾರ್ ಅಹ್ಮದ್ ಸಮ್ಮೇಳನವನ್ನು ಉದ್ಘಾಟಿ ಸಲಿದ್ದಾರೆ ಎಂದರು.