ರೇಲ್ವೆ ಗೇಟ್ ಸಮಸ್ಯೆ: ಪರದಾಡಿದ ಜನತೆ

Updated on: 

ಕುಂದಗೋಳ: ಇಲ್ಲಿನ ಯರಗುಪ್ಪಿ ರಸ್ತೆಯ ರೇಲ್ವೆ ಗೇಟ್ ರೂಫ್ ವೈರ್ ತುಂಡಾಗಿದ್ದರ ಪರಿಣಾಮ ನೂರಾರು ವಾಹನಗಳು ಎರಡು ಕಡೆಯಿಂದ ಚಲಿಸದಂತಾಗಿ ಸುಮಾರು 40 ನಿಮಿಷಗಳವರೆಗೆ ತಟಸ್ಥಗೊಂಡಿದ್ದಲ್ಲದೆ, ತುರ್ತಾಗಿ ಬೆಂಕಿ ನಂದಿಸಲು ತೆರಳುತ್ತಿದ್ದ ಅಗ್ನಿಶಾಮಕ ವಾಹನಕ್ಕೂ ತೊಂದರೆಯಾದ ಘಟನೆ ಮಂಗಳವಾರ ಜರುಗಿತು.
ಮಧಾಹ್ನ 1 ಗಂಟೆ ಸುಮಾರಿಗೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಜನಶತಾಬ್ಧಿ ಹಾಗೂ ಬೆಂಗಳೂರತ್ತ ಹೊರಟಿದ್ದ ದಾದರ ಎಕ್ಸ್‌ಪ್ರೆಸ್ ರೈಲು ಕ್ರಾಸಿಂಗ್ ಇದ್ದ ಕಾರಣ ಗೇಟ್ ಹಾಕಲಾಗಿತ್ತು. ಎರಡೂ ರೈಲು ಗಾಡಿ ಚಲಿಸಿದ ನಂತರ ಗೇಟ್ ತೆರೆಯುವಾಗ ಎರಡೂ ಗೇಟಿನ ರೂಫ್ ವೈರ್ ಕತ್ತರಿಸಿಕೊಂಡ ಪರಿಣಾಮ ಗೇಟ್ ತೆರೆಯಲಾಗಲೇ ಇಲ್ಲ. ಇದರಿಂದ ಪ್ರಯಾಣಿಕರು ಬೇಸತ್ತರು. ದ್ವಿಚಕ್ರದ ಸವಾರರು ಸ್ವತಃ ತಾವೇ ಗೇಟ್‌ನ್ನು ಮೇಲೆತ್ತಿಕೊಂಡು ನುಸುಳಿ ಪಾರಾದರು. ನಂತರ ಜನಸಾಮಾನ್ಯರೆಲ್ಲ ಸೇರಿ ಗೇಟ್‌ನ್ನು ಮೇಲೆತ್ತಿ ಹಗ್ಗದಿಂದ ಕಟ್ಟಿ ನಿಲ್ಲಿಸಿದ ಮೇಲೆ ಸಂಚಾರ ಸುಗಮಗೊಂಡಿತು.
ಕುಂದಗೋಳ ಕಡಪಟ್ಟಿ ರಸ್ತೆಯ ಪಪಂನ ತ್ಯಾಜ್ಯ ವಸ್ತುವಿಗೆ ತಗುಲಿದ ಬೆಂಕಿ ಆರಿಸಲು ಹೊರಟಿದ್ದ ಅಗ್ನಿ ಶಾಮಕ ವಾಹನ ಸುಮಾರು 40 ನಿಮಿಷಗಳ ಕಾಲ ಗೇಟ್ ಅವಾಂತರದಿಂದ ಮಧ್ಯೆ ಸಿಲುಕಿ ಬೆಂಕಿ ನಂದಿಸುವ ಕಾರ್ಯಕ್ಕೆ ವಿಳಂಬವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com