ನಾಳೆಯಿಂದ ಗ್ರಂಥಾಲಯ ಸಂಘದ ಸಮ್ಮೇಳನ

Updated on: 

ಧಾರವಾಡ:  ಕರ್ನಾಟಕ ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸುವರ್ಣ ಮಹೋತ್ಸವ ಮತ್ತು 58ನೇ ಭಾರತೀಯ ಗ್ರಂಥಾಲಯ ಸಂಘದ ಅಂತಾರಾಷ್ಟ್ರೀಯ ಸಮ್ಮೇಳನ ಫೆ. 24ರಿಂದ 27ರ ವರೆಗೆ ಕವಿವಿಯ ಸುವರ್ಣ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ೤ ಬಿ.ಡಿ. ಕುಂಬಾರ, ದೇಶ-ವಿದೇಶಗಳಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಶಿಕ್ಷಕರು, ಪರಿಣಿತರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಚರ್ಚೆ-ಪ್ರಚರ್ಚೆಗಳು ನಡೆಯಲಿವೆ. ಫೆ. 24ರಂದು ಸಂಜೆ 4.30ಕ್ಕೆ ಉದ್ಘಾಟನೆ ನಡೆಯಲಿದ್ದು, ಪ್ರೊ೤ ಇಸ್ಮಾಯಿಲ್ ಅಬ್ದುಲ್ಲಾಹಿ, ಡಾ೤ ವಿನೋದ ನೋವಲ್ ಭಾಗವಹಿಸುತ್ತಾರೆ. ಕವಿವಿ ಕುಲಪತಿ ಡಾ೤ ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ವಿಭಾಗದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಗುತ್ತಿದೆ. ದೇಶ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಭಾಗದ ಹಳೆ ವಿದ್ಯಾರ್ಥಿಗಳೂ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಸಮ್ಮೇಳನದಲ್ಲಿ ಸುಮಾರು 12 ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ೤ ಸಂಜಯ ಮಾಲಗತ್ತಿ, ಡಾ೤ ಮಹೇಶ ಹೊರಕೇರಿ, ಬಿ.ಎಸ್. ಮಾಳವಾಡ, ಎಂ.ಎನ್. ಮೂಲಿಮನಿ, ಡಾ೤ ಗುರುರಾಜ ಹಡಗಲಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com