ನಾಳೆ ಹುಬ್ಳಿ ಮ್ಯಾರಥಾನ್-13
ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಬಿವಿ ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಫೆ. 24ರಂದು ಬೆಳಗ್ಗೆ 6.15ಕ್ಕೆ ಹುಬ್ಳಿ ಮ್ಯಾರಥಾನ್-2013ನ್ನು ಕಾಲೇಜು ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ. ಮ್ಯಾರಥಾನ್ ಓಟ ಒಟ್ಟು 14 ಕಿಲೊ ಮೀಟರ್ ಸಾಗಲಿದೆ. ಬಿವಿಬಿ ಕ್ಯಾಂಪಸ್ನಿಂದ ಹೊಸೂರು ಸರ್ಕಲ್, ಕೆ.ಸಿ. ಸರ್ಕಲ್, ಕೇಶ್ವಾಪುರ ಸರ್ಕಲ್, ರೇಲ್ವೆ ನಿಲ್ದಾಣ, ಲ್ಯಾಮಿಂಗ್ಟನ್ ರಸ್ತೆ, ಚೆನ್ನಮ್ಮ ಸರ್ಕಲ್, ಗೋಕುಲ್ ರಸ್ತೆ, ಅಕ್ಷಯ ಪಾರ್ಕ್, ರವಿ ನಗರ, ಶಿರೂರ ಪಾರ್ಕ್ ಮೂಲಕ ಮರಳಿ ಬಿವಿಬಿ ಕ್ಯಾಂಪಸ್ನಲ್ಲಿ ಮ್ಯಾರಾಥಾನ್ ಅಂತ್ಯಗೊಳ್ಳಲಿದೆ. ಸಾಮಾನ್ಯ ಮತ್ತು ವಿಶೇಷ ವಿಭಾಗಗಳಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಲಿದ್ದು, ವಿಶೇಷ ವಿಭಾಗದಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು ಮತ್ತು 14 ವರ್ಷದೊಳಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ರು. 10 ಸಾವಿರ, ರು. 7 ಸಾವಿರ ಮತ್ತು ರು. 5 ಸಾವಿರ ಬಹುಮಾನಗಳನ್ನು ಮೊದಲ ಮೂರು ಸ್ಥಾನ ಪಡೆದವರಿಗೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ನೀಹಿ ಸಂಹಿತೆ: ಆಯುಧ ಠೇವಣಿ ಮಾಡಿ
ಧಾರವಾಡ: ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ಮಾ. 11ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಪೊಲೀಸ್ ಠಾಣೆಗಳಲ್ಲಿ ಬಂದೂಕುಗಳಂತಹ ಆಯುಧಗಳನ್ನು ಠೇವಣಿ ಮಾಡಿ ಅಗತ್ಯ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಆದೇಶ ಹೊರಡಿಸಿದ್ದಾರೆ. ಚುನಾವಣೆ ಫಲಿತಾಂಶದ ಒಂದು ವಾರದ ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳು ಆಯುಧಗಳನ್ನು ಬಿಡುಗಡೆ ಮಾಡಿ ಲೈಸನ್ಸ್ದಾರರಿಗೆ ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.