ನವಲಗುಂದ: ಬೈಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ದೇವಟಗಿ ಕ್ರಾಸ್ ಬಳಿ ನಡೆದಿದೆ. ಹುನಗುಂದ ಅಮರಾವತಿ ದ್ಯಾಮಣ್ಣ ಮಾದರ(25) ಮತ್ತು ರಮೇಶ್ ಮಾದರ(24) ಎಂಬಾತರೇ ಮೃತಪಟ್ಟ ದುರ್ದೈವಿಗಳು. ಮಂಗಳವಾರ ರಾತ್ರಿ ಹುನಗುಂದದಿಂದ ನವಲಗುಂದಕ್ಕೆ ಬೈಕ್ನಲ್ಲಿ ತೆರಳುವ ಸಂದರ್ಭ ಈ ದುರ್ಘಟನೆ ನಡೆದಿದ್ದು, ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.