ಧಾರವಾಡ: ಬೀಜಧನ ಸಾಲಬಡ್ಡಿಮನ್ನಾ ಸೌಲಭ್ಯ

Updated on: 

ಧಾರವಾಡ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗದಿಂದ ಕೈಗಾರಿಕಾ ಘಟಕಗಳಿಗೆ ನೀಡಿರುವ ಬೀಜಧನ ಸಾಲವನ್ನು ಬಡ್ಡಿರಹಿತವಾಗಿ ಒಂದೇ ಕಂತಿನಲ್ಲಿ ಮರು ಪಾವತಿಸಲು ಮಾ. 3 ಕೊನೆಯ ದಿನ. ಅನಂತರ ಸಾಲ ಹಾಗೂ ಬಡ್ಡಿಯನ್ನು ಭೂಕಂದಾಯ ನಿಯಮದಂತೆ ವಸೂಲಿ ಮಾಡಲಾಗುವುದು. ಜಿಲ್ಲೆಯಲ್ಲಿ ಬೀಜಧನ ಸಾಲ ಪಡೆದ ಕೈಗಾರಿಕಾ ಘಟಕಗಳು ಇದರ ಪ್ರಯೋಜನ ಪಡೆದು ಒಂದೇ ಕಂತಿನಲ್ಲಿ ಅಸಲು ಪಾವತಿಸಿ ಬಡ್ಡಿ ಮನ್ನಾ ಸೌಲಭ್ಯ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 0836-2324798 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಕಳ್ಳಭಟ್ಟಿ ತಡೆಗೆ ಕಂಟ್ರೋಲ್ ರೂಂ
ಧಾರವಾಡ: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಅಕ್ರಮ ಮದ್ಯ, ಕಳ್ಳಭಟ್ಟಿ ಹಾಗೂ ನಕಲಿ ಮದ್ಯ ತಯಾರಿಕೆ, ಸಂಗ್ರಹ, ಸಾಗಾಟ ತಡೆಗೆ ಅಬಕಾರಿ ಇಲಾಖೆ ಕಂಟ್ರೋಲ್ ರೂಂ ರಚಿಸಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 0836-2322066ಗೆ ಕರೆ ಮಾಡಿ ಅಕ್ರಮಗಳ ಕುರಿತ ಮಾಹಿತಿ ನೀಡಬಹುದು. ದೂರು ದಾಖಲುಪಡಿಸಿದ ವ್ಯಕ್ತಿಯ ಹೆಸರು ಗೌಪ್ಯವಾಗಿಡಲಾಗವುದು. ಅಲ್ಲದೆ, ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com